ಹೊಸ ಹಾದಿಯ ಕನಸು

ರಾಣಿ ಆಗಷ್ಟೇ 10ನೇ ತರಗತಿ ಮುಗಿಸಿ ಕಾಲೇಜಿಗೆ ಸೇರಿದು. ಕಾಲೇಜು ಮನೆಯಿಂದ ಸ್ವಲ್ಪ ದೂರವಾಗಿರುವುದರಿಂದ ಹಾಸ್ಟೆಲ್‌ನಲ್ಲಿ ಇರಬೇಕಾಯಿತು. ಸೈನ್ಸ್ ಆಯ್ಕೆ ಮಾಡಿ ಎಂಜಿನಿಯರಿಂಗ್ ಮಾಡುವ ಕನಸು. ನಾಳೆಯಿಂದ ಕಾಲೇಜು ಪ್ರಾರಂಭವಾಗುತ್ತದೆ. ಆ ರಾತ್ರಿ, ರಾಣಿಗೆ ನಿದ್ರೆ ಬರಲಿಲ್ಲ. ಹೊಸ ಕಾಲೇಜು ಹೇಗಿರುತ್ತೆ, ಸ್ನೇಹಿತರು ಹೇಗಿರುತ್ತಾರೆ? ನಾನು ಸೈನ್ಸ್ ಓದಬಹುದೇ? ಇಷ್ಟು ದಿನ ಕನ್ನಡದಲ್ಲಿ ಓದಿದ ರಾಣಿಗೆ, ಮುಂದೆ ಎಲ್ಲಾ ವಿಷಯಗಳು ಇಂಗ್ಲಿಷ್‌ನಲ್ಲಿ ಇರುವುದರಿಂದ ಅರ್ಥವಾಗುತ್ತಾ ಎಂಬ ಭಯ. 

 ಅಮ್ಮನಿಗೆ ಸಂಬಂಧಿಕರು - "ಅಷ್ಟು ಹೆಣ್ಣುಮಕ್ಕಳನ್ನು ಯಾಕೆ ಓದಿಸುತ್ತೀರಾ, ಗಂಡು ಸಿಗೋದು ಕಷ್ಟ," ಎಂದವರು. ಅಮ್ಮನಿಗೆ ಭಯ ಮತ್ತು ಆಶಾಭಾವನೆಗಳ ಮಿಶ್ರ ಭಾವನೆಗಳಾಗಿದ್ದವು. ಅಪ್ಪನಿಗೆ ಹಣದ ಯೋಚನೆ. ನೂರು ಜನ ನೂರು ಮಾತನಾಡಿದ್ದರು. ಹೀಗೆ ಯೋಚಿಸುತ್ತಾ ಮಲಗಿದ ರಾಣಿ, ಯಾವಾಗ ನಿದ್ರೆ ಬಂತೋ ಗೊತ್ತಾಗಲಿಲ್ಲ. ಅಮ್ಮ ದೇವಕಿ ಬಂದು ಎಬ್ಬಿಸಿದಾಗ ಎಚ್ಚರವಾದಳು. ಬೇಗನೆ ಬ್ರಶ್ ಮಾಡಿ ಸ್ನಾನ ಮುಗಿಸಿ ತಯಾರಾದಳು. ಅಪ್ಪ ಶಿವಪ್ಪ  ಆಗಲೇ ಬೈಯಲಾರಂಭಿಸಿದರು ಹೀಗೆ ನಿದ್ದೆ ಮಾಡಿದರೆ  ಸೈನ್ಸ್ ಓದುವುದು ಸುಲಭವಲ್ಲ" ಎಂದು ಹೇಳಿದರು. ಹೊಸ ಕಾಲೇಜಿಗೆ ಸೇರಿದ ಕಾರಣ, ಅಪ್ಪ ಹಾಸ್ಟೆಲ್‌ಗೆ ಸೇರಿಸಲು ಜೊತೆಗೆ ಬಂದರು. ಅಮ್ಮನ ಮುಖದಲ್ಲಿ ಖುಷಿ ಮತ್ತು ಒಂದು ಕಡೆ ಭಯ ಕಂಡುಬಂದಿತ್ತು. ತಂಗಿ ರಾಮ್ಯಾಗೆ ಬೈ ಹೇಳಿ ಹೊರಟೆವು.

ಮುಂದುವರೆಯುವುದು.....



Comments

Popular posts from this blog

ಆ ದಿನಗಳು

ರೈಲು ಪ್ರಯಾಣ

ಕೇಶವನ ಕನಸು ಸಾಕಾರ: ಕಮಲಾಳ ಹೋರಾಟದ ಕಥೆ