ಪ್ರೀತಿ ಎಂಬ ಬಲೆ
ನಾನು ಇತರ ಅನೇಕ ಯುವಕರಂತೆ ಕೆಲಸ ಮಾಡಲು ಬೆಂಗಳೂರಿಗೆ ಹೋಗಿದ್ದೆ. ನನ್ನಲ್ಲಿ ಒಂದು ಸಣ್ಣ ಹಳ್ಳಿಯಿಂದ ದೊಡ್ಡ ನಗರಕ್ಕೆ ಬರುವುದು ಗಮನಾರ್ಹ ಬದಲಾವಣೆಯಾಗಿದೆ. ಗೀತಾ ಮತ್ತು ಮಮತಾ ಎಂಬ ಇಬ್ಬರು ರೂಮ್‌ಮೇಟ್‌ಗಳೊಂದಿಗೆ ನಾನು ಪೇಯಿಂಗ್ ಗೆಸ್ಟ್ (ಪಿಜಿ) ವಸತಿಗೃಹದಲ್ಲಿ ಉಳಿದುಕೊಂಡೆ, ಇಬ್ಬರೂ ಎಂಎನ್‌ಸಿಗಳಲ್ಲಿ ಕೆಲಸ ಮಾಡುತ್ತಿದ್ದರು.
ಮಮತಾಗೆ ಪ್ರವೀಣ್ ಎಂಬ ಗೆಳೆಯನಿದ್ದ, ಅವರು ಒಂದೇ ಕಾಲೇಜ್ ನಲ್ಲಿ ಓದಿದ್ದರೂ.ಮಮತಾ 4 ವರ್ಷ ಹಿಂದೇನೇ ಬೆಂಗಳೂರಿಗೆ ಬಂದರು.ಪ್ರವೀಣ್ ತನ್ನ ಫೇಲ್ ಆದ ವಿಷಯವನ್ನು ಪಾಸ್ ಮಾಡಿ ವಿಷಯವನ್ನು 2 ವರ್ಷಗಳ ನಂತರ ಬಂದನು.
ಡಿಗ್ರಿ ಮುಗಿಸಿ ಎರಡು ವರ್ಷ ಕಳೆದರೂ ಪ್ರವೀಣ್‌ಗೆ ಇನ್ನೂ ಕೆಲಸ ಸಿಕ್ಕಿರಲಿಲ್ಲ. ಪ್ರವೀಣ್ ನಿರುದ್ಯೋಗಿ ಎಂಬುದು ಮಮತಾಗೆ ತಿಳಿದಿತ್ತು ಮತ್ತು ಪದವಿ ಮುಗಿದ ನಂತರ ಕೆಲಸ ಹುಡುಕುತ್ತಾ ಸಮಯ ಹಾಳು ಮಾಡಿದ್ದಾನೆ ಎಂದು ಚಿಂತೆ ಪಡುತ್ತಿದ್ದಳು
ಇಷ್ಟೆಲ್ಲಾ ಆದರೂ ಮಮತಾ ಪಿಜಿ ಬಾಡಿಗೆ, ಊಟ, ಇತರೆ ಖರ್ಚು ಸೇರಿದಂತೆ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದರು. ಅವಳು ತನ್ನ ತಂಗಿಯ ಶಿಕ್ಷಣವನ್ನು ಕುಟುಂಬದ ವೆಚ್ಚ ಸೇರಿದಂತೆ ಅನೇಕ ಜವಾಬ್ದಾರಿಗಳನ್ನು ಹೊಂದಿದ್ದಳು, ಇನ್ನೂ ಪ್ರವೀಣ್‌ನನ್ನು ನೋಡಿಕೊಳ್ಳುವ ಜವಾಬ್ದಾರಿ.
ಮತ್ತೊಂದೆಡೆ ಪ್ರವೀಣ್ ಪ್ರತಿದಿನ ರೆಸ್ಟೋರೆಂಟ್‌ಗಳಲ್ಲಿ ಊಟ ಮಾಡುತ್ತಿದ್ದರೆ, ಮಮತಾ PG ಆಹಾರ ಇಷ್ಟವಿಲ್ಲವಾದರೂ ಸಹಿಸಿಕೊಳ್ಳುತ್ತಿದ್ದಳು..
ಒಂದು ದಿನ, ನಾವು ಮೂವರು ಹುಡುಗಿಯರು ರೆಸ್ಟೋರೆಂಟ್ ಗೆ ಹೋದಾಗ, ಪ್ರವೀಣ್ ಸಹ ಬಂದ. ಬಿಲ್ ಬಂದಾಗ, ಅವನು ಮಮತಾಳಿಂದ ಹಣ ತೆಗೆದು ಬಿಲ್ ಕಟ್ಟಿದ.ಅವನು ಯಾಕೆ ಇನ್ನೂ ತನಗಾಗಿ ಏಕೆ ಸಂಪಾದಿಸುತ್ತಿಲ್ಲ ಎಂದು ಆಲೋಚಿಸಿದೆ. 4-5 ವರ್ಷಗಳಿಂದ ಮಮತಾ ಅವರಿಗೆ ಆರ್ಥಿಕ ನೆರವು ನೀಡುತ್ತಿದ್ದರು.
Comments