Posts

Showing posts with the label ರಕ್ಷಾ ಬಂಧನ

ಪ್ರಪಂಚದಾಚೆ ಕನಸುಗಳ ಹಾದಿ: ಅಂತ್ಯದಲ್ಲಿ ಖಾಲಿಹಸ್ತ

 ಸಂದೇಶ್‌ಗೆ ಇಬ್ಬರು ಸಹೋದರರು ಮತ್ತು ನಾಲ್ವರು ಸಹೋದರಿಯರು.ಅಣ್ಣ ಸಂಜಯ್, ತಮ್ಮ ಸಂತೋಷ್.ಸಂಧ್ಯಾ, ಸವಿತಾ, ಸುಮಿತ್ರಾ ಮತ್ತು ಸುಜಾತ ತಂಗಿಯರು. ಸಹೋದರರಿಗೆ ಅಧ್ಯಯನದಲ್ಲಿ ಆಸಕ್ತಿ ಇರಲಿಲ್ಲ.10 ನೇ ತರಗತಿಯಲ್ಲಿ ಅನುತ್ತೀರ್ಣ.ಆದರೆ ಸಂದೇಶಗೆ ಓದಲು ತುಂಬಾ ಆಸಕ್ತಿ.ಡಿಪ್ಲೊಮಾವನ್ನು  ಮುಗಿಸಿದ.ಆದರೆ  ತಂದೆ ತಂಗಿಯರಿಗೆ ಓದಲು ಅವಕಾಶ ನೀಡಲಿಲ್ಲ. ಸುದೇಶ್‌ಗೆ ವಿದೇಶದಲ್ಲಿ ಕೆಲಸ ಸಿಕ್ಕಿತು.ಅದು ಅವನ ಜವಾಬ್ದಾರಿಯನ್ನು ಹೆಚ್ಚಿಸಿತು.ಸಂಜಯ್ ವ್ಯಾಪಾರ ಆರಂಭಿಸಲು, ಮನೆ ಕಟ್ಟಿಲು,ಹಣ ಕೇಳಿದರು.ಮದುವೆಯೂ ಆಯಿತು. ಆದರೆ, ಸಂಜಯ್ ಕುಟುಂಬದ ಯಾವುದೇ ಜವಾಬ್ದಾರಿಯನ್ನು ಹೊರಲು ಸಿದ್ಧರಿರಲಿಲ್ಲ. ತಂಗಿಯರ ಮದುವೆ ಮಾಡುವ ಜವಾಬ್ದಾರಿಯೂ ಸಂದೇಶ್ ಮೇಲೆ ಬಿದ್ದಿತ್ತು. ಮೊದಲ ತಂಗಿ ಸಂಧ್ಯಾಳ ಮದುವೆ. ಆ ಸಮಯದಲ್ಲಿ ತಾಯಿ ಕಮಲಾ ಅನಾರೋಗ್ಯ ಸಂದೇಶ್ ಚಿಕಿತ್ಸೆಗೆ ಸಾಕಷ್ಟು ಹಣವನ್ನು ಖರ್ಚು ಮಾಡಿದ, ಆದರೆ ದುರದೃಷ್ಟವಶಾತ್ ಅವರು ನಿಧನರಾದರು. ಈಗ, ಸಂದೇಶನ ಬಳಿ ಹಣವಿಲ್ಲ, ಆದರೆ ಅವನು ಇನ್ನೂ ತನ್ನ ಉಳಿದ ಮೂವರು ತಂಗಿಯರ ಮದುವೆಯನ್ನು ಮಾಡಬೇಕಾಗಿತ್ತು. ತಮ್ಮಸಂತೋಷ್ ಭವಿಷ್ಯದಲ್ಲಿ ತನಗೆ ಬೆಂಬಲ ನೀಡುತ್ತಾನೆ ಎಂದು ಅವರು ಭಾವಿಸಿ. ಸಂತೋಷ್‌ಗಾಗಿ ಆಟೋ ರಿಕ್ಷಾವನ್ನು ಸಹ ಖರೀದಿಸಿದ. ಸಂದೇಶ್ ವರದಕ್ಷಿಣೆ ತೆಗೆದುಕೊಂಡು ತನ್ನ ಎರಡನೇ ತಂಗಿ ಸವಿತಾಳ ಮದುವೆಯನ್ನು ಏರ್ಪಡಿಸಿದ್ದ.ಸಂತೋಷ್ ಗೆ ಮದುವೆ ಮಾಡಿಸಿ  ಮೂರನೇ ತಂ...

ಈ ರಕ್ಷಾ ಬಂಧನದಂದು, ಬಾಲ್ಯದ ನೆನಪುಗಳು

ಸಂದೇಶ್ 3 ವರ್ಷದಾಗಿದ್ದಾಗ, ಅವನಿಗೆ  ಸಂಧ್ಯಾ  ಎಂಬ ಚಿಕ್ಕ ತಂಗಿ ಹುಟ್ಟಿದಳು.  ಅವಳು ರಾತ್ರಿ 8 ಗಂಟೆಗೆ ಜನಿಸಿದಳು. ಸಂದೇಶ್ ತನ್ನ ತಾಯಿಯ ಪಕ್ಕದಲ್ಲಿ ಮಲಗಿದ್ದನು , ಅವನು ಎದ್ದು ತಾಯಿಯ ಮಡಿಲಲ್ಲಿ ಚಿಕ್ಕ ಮಗುವನ್ನು ನೋಡಿದ. ನೆರೆಯ ಅಕ್ಕ ಅಣ್ಣದ್ದಿರು ನಿನ್ನ ತಂಗಿ ಅಲ್ಲ ಅವಳು ಕಪ್ಪಾಗಿದಾಳೆ ಎಂದು ಜೇಡಿಸಿದರು.ಅದಕ್ಕೆ ಅಳುತ್ತಾ ಕುಳಿತಿದ್ದ ಸಂದೇಶ್.ಅವಾಗ ಅವನ ಅಜ್ಜಿ ಅಬುಜಾ, ಆ ಮಗುವನ್ನು ಕೆರೆಯ ಬಳಿ ಕಂಡೆ  ಎಂದು ಅವನಿಗೆ ಹೇಳಿದಳು. ಇದನ್ನು ನಂಬಿದ ಸಂದೇಶ್, ತನ್ನ ಅಜ್ಜಿ ಕೆರೆಯ ಬಳಿಯಿಂದ ಮಗುವನ್ನು ತಂದಳು ಎಂದು ಎಲ್ಲರಿಗೆ ಹೇಳಿದ. ಅದಕ್ಕೆ ಕಪ್ಪುಗಿದ್ದಾಳೆ ಎಂದು ಮುದ್ದಾಗಿ ಹೇಳುತ್ತಿದ್ದ.ಸಂಧ್ಯಾಳ ಮೇಲೆ ಸಂದೇಶ್ ತುಂಬಾ ಕಾಳಜಿ  ವಹಿಸಿದ್ದ , ಮತ್ತು ಅವನು ತನ್ನ ತಂಗಿಯನ್ನು ಶಾಲೆಗೆ ಕರೆದುಕೊಂಡು ಹೋಗುವಾಗ ಯಾರಿಗೂ ಅವಳನ್ನು ಮುಟ್ಟಲು ಬಿಡುತ್ತಿರಲಿಲ್ಲ.