ಈ ರಕ್ಷಾ ಬಂಧನದಂದು, ಬಾಲ್ಯದ ನೆನಪುಗಳು

ಸಂದೇಶ್ 3 ವರ್ಷದಾಗಿದ್ದಾಗ, ಅವನಿಗೆ ಸಂಧ್ಯಾ ಎಂಬ ಚಿಕ್ಕ ತಂಗಿ ಹುಟ್ಟಿದಳು. ಅವಳು ರಾತ್ರಿ 8 ಗಂಟೆಗೆ ಜನಿಸಿದಳು. ಸಂದೇಶ್ ತನ್ನ ತಾಯಿಯ ಪಕ್ಕದಲ್ಲಿ ಮಲಗಿದ್ದನು, ಅವನು ಎದ್ದು ತಾಯಿಯ ಮಡಿಲಲ್ಲಿ ಚಿಕ್ಕ ಮಗುವನ್ನು ನೋಡಿದ. ನೆರೆಯ ಅಕ್ಕ ಅಣ್ಣದ್ದಿರು ನಿನ್ನ ತಂಗಿ ಅಲ್ಲ ಅವಳು ಕಪ್ಪಾಗಿದಾಳೆ ಎಂದು ಜೇಡಿಸಿದರು.ಅದಕ್ಕೆ ಅಳುತ್ತಾ ಕುಳಿತಿದ್ದ ಸಂದೇಶ್.ಅವಾಗ ಅವನ ಅಜ್ಜಿ ಅಬುಜಾ, ಆ ಮಗುವನ್ನು ಕೆರೆಯ ಬಳಿ ಕಂಡೆ  ಎಂದು ಅವನಿಗೆ ಹೇಳಿದಳು. ಇದನ್ನು ನಂಬಿದ ಸಂದೇಶ್, ತನ್ನ ಅಜ್ಜಿ ಕೆರೆಯ ಬಳಿಯಿಂದ ಮಗುವನ್ನು ತಂದಳು ಎಂದು ಎಲ್ಲರಿಗೆ ಹೇಳಿದ. ಅದಕ್ಕೆ ಕಪ್ಪುಗಿದ್ದಾಳೆ ಎಂದು ಮುದ್ದಾಗಿ ಹೇಳುತ್ತಿದ್ದ.ಸಂಧ್ಯಾಳ ಮೇಲೆ ಸಂದೇಶ್ ತುಂಬಾ ಕಾಳಜಿ ವಹಿಸಿದ್ದ, ಮತ್ತು ಅವನು ತನ್ನ ತಂಗಿಯನ್ನು ಶಾಲೆಗೆ ಕರೆದುಕೊಂಡು ಹೋಗುವಾಗ ಯಾರಿಗೂ ಅವಳನ್ನು ಮುಟ್ಟಲು ಬಿಡುತ್ತಿರಲಿಲ್ಲ. 

Comments

Popular posts from this blog

ಆ ದಿನಗಳು

ಕೇಶವನ ಕನಸು ಸಾಕಾರ: ಕಮಲಾಳ ಹೋರಾಟದ ಕಥೆ

ರೈಲು ಪ್ರಯಾಣ