ಬಣ್ಣ ಬಣ್ಣದ ಭಾವನೆಗಳು
ಇದು ತಕ್ಷಣವೇ ವಿಭಿನ್ನ ಭಾವನೆಗಳು ಮತ್ತು ಬದಲಾವಣೆಗಳ ಆಕರ್ಷಕ ಚಿತ್ರಣವನ್ನು ಮೂಡಿಸುತ್ತದೆ. ಕಥೆಯು ಜನರ ಮನೋಭಾವಗಳಲ್ಲಿ ಸಂಭವಿಸುವ ತ್ವರಿತ ಬದಲಾವಣೆಗಳನ್ನು ಕುರಿತು ಸೂಚಿಸುತ್ತದೆ.
ಒಂದು ನಿಮಿಷದ ಹಿಂದೆ ಬಿಸಿಲು ಇತ್ತು.ಅಪರೂಪಕ್ಕೆ ಬಿಸಿಲು. ಇಂದು ಕೊನೆಗೂ ಸೂರ್ಯ ಕಾಣಿಸಿಕೊಂಡು, ಒಂದು ತಿಂಗಳಿಂದ ಸತತವಾಗಿ ಮಳೆಯಾಗುತ್ತಿರುವುದರಿಂದ ನಾನು ಮತ್ತು ನನ್ನ ನೆರೆಹೊರೆಯವರು ಸಂತೋಷಪಟ್ಟೆವು.
ಬಟ್ಟೆ, ಧಾನ್ಯಗಳು ಎಲ್ಲವೂ ತೇವದಿಂದ, ಮತ್ತು ಎಲ್ಲೆಡೆಯೂ ದುರ್ವಾಸನೆಯಿತ್ತು. ನಾವು ಎಲ್ಲಾ ನಮ್ಮ ಬಟ್ಟೆಗಳನ್ನು, ಧಾನ್ಯಗಳು, ಮಕ್ಕಳ ಸಮವಸ್ತ್ರಗಳನ್ನು ಮತ್ತು ಕಛೇರಿಯ ಉಡುಪುಗಳನ್ನು ಹೊರಗೆ ಹಾಕಲು ಧಾವಿಸಿದೆವು, ಅನೇಕ ತಿಂಗಳುಗಳ ನಂತರ, ಸೂರ್ಯನನ್ನು ಎಲ್ಲರೂ ಪ್ರೀತಿಯಿಂದ ಸ್ವಾಗತಿಸಿದರು.
ಇದ್ದಕ್ಕಿದ್ದಂತೆ, ಮತ್ತೆ ಮಳೆ ಸುರಿಯಲಾರಂಭಿಸಿತು, ಮತ್ತು ಎಲ್ಲವೂ ಮತ್ತೆ ತೇವವಾಯಿತು. ಎಲ್ಲರೂ ಆಶ್ಚರ್ಯಪಟ್ಟರು, ಕೆಲವರು ನಗುತಿದ್ದರು, ಇನ್ನು ಕೆಲವರು ಬೈದರು. ಕೆಲವೇ ನಿಮಿಷಗಳಲ್ಲಿ, ಬಣ್ಣ ಬಣ್ಣದ ಭಾವನೆಗಳು ಎಲ್ಲೆಡೆ ಮಿಳಿತಗೊಂಡವು

Comments