ಮೌನದ ನಗುವಿನೊಳಗಿನ ನೋವು

ನೀತಾಳ ಮದುವೆಯಾಗಿ ಹತ್ತು ವರ್ಷಗಳು ಕಳೆದಿವೆ, ಆದರೆ ಅವಳಿಗೆ ಇನ್ನೂ ಮಕ್ಕಳಾಗಿಲ್ಲ. ಈ ದಶಕದಲ್ಲಿ, ಎಲ್ಲೆಡೆ ಅವಳಿಗೆ ಮಗು ಇಲ್ಲದ ವಿಷಯವನ್ನು ಕೇಳುತ್ತಿರುವವರು ಸಾಕಷ್ಟು. ಅವಳು ತೊಂದರೆಗಳಿಲ್ಲದೇ ತನ್ನನ್ನು ತಾನೇ ದೂಷಿಸುತ್ತಾಳೆ. 


ಯಾವುದೇ ಸಮಾರಂಭದಲ್ಲಿ ಹಾಜರಾಗುವಾಗ, ನೀತಾಳ ಮುಂದೆ ಇರುವ ಪ್ರಶ್ನೆ ಒಂದೇ - "ಮಕ್ಕಳು ಯಾವಾಗ?" ನೀತಾ ತುಂಬಾ ಸೂಕ್ಷ್ಮ ಸ್ವಭಾವದವಳು, ವಿಶೇಷವಾಗಿ ಇಂತಹ ಕೌಟುಂಬಿಕ ವಿಷಯಗಳ ಬಗ್ಗೆ. ಅನೇಕರು ತಮ್ಮ ಸಲಹೆಗಳು ಮತ್ತು ಸೂಚನೆಗಳನ್ನು ಕೊಡುವುದರಲ್ಲಿ ತಾವು ತಜ್ಞರು.


ಒಂದು ದಿನ, ನೀತಾ ಮತ್ತು ಅತ್ತೆ ಕಮಲಾ ಒಂದು ಸಮಾರಂಭಕ್ಕೆ ಪಾಲ್ಗೊಳ್ಳುವರು. ಅಲ್ಲಿಯೂ ಇದೇ ಪ್ರಶ್ನೆ.ನೀವು ಯಾವಾಗ ಅಜ್ಜಿ ಆಗುವುದು? ಎಂದಿನಂತೆ ಅತ್ತೆ ಕಮಲಾ ತನ್ನ ಸೂಸೆಯ ಮೇಲೆ ಗೂಬೆ ಕೂರಿಸಿ ಆಯಿತು.


ಈ ಮಾತಿನಿಂದ ಗಾಬರಿಯಾದ ನೀತಾ ಮೌನವಾಗಿ ನಗುತ್ತಾಳೆ. ನೀತಾಳ ಪೋಷಕರು ಆಸ್ತಿಯನ್ನು ಅವಳಿಗೆ ಕೊಡುವವರೆಗೂ, ಕುಟುಂಬವು ಮಗುವನ್ನು ಸ್ವೀಕರಿಸಲು ಮುಂದಾಗುವುದಿಲ್ಲ. ಕುಟುಂಬವು ಆಸ್ತಿಯ ವಿಚಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ. ನೀತಾಳ ನಿರ್ಧಾರಗಳು ಮತ್ತು ಅವಳ ಜೀವನದ ಆಯ್ಕೆಗಳನ್ನು ಆಸ್ತಿಯ ವಿಚಾರದಿಂದ ನಿರ್ಧರಿಸಲಾಗುತ್ತವೆ. 

ನೀತಾಳ ಮೌನ ನಗು ಅವಳ ಯಥಾರ್ಥವನ್ನು ಮರೆಮಾಚಿದಂತೆ ತೋರುತ್ತದೆ, ಆದರೆ ಆಧುನಿಕ ಜೀವನದಲ್ಲಿ ಅವಳ ಮುಗ್ಧ ಮುಖವು ಇತರರ ಮುಂದೆ ಅವಳ ಆತ್ಮವಿಶ್ವಾಸದ ಮುಖವನ್ನೇ ಪ್ರದರ್ಶಿಸುತ್ತಿದೆ.

Comments

Popular posts from this blog

ದೂರದ ಅಭಿಲಾಷೆಯಿಂದ, ಇರುವುದುನು ಮರೆತೇವಾ?

ಎಲ್ಲಿ ಜಾರಿತು ಮನ?

ಕೇಶವನ ಕನಸು ಸಾಕಾರ: ಕಮಲಾಳ ಹೋರಾಟದ ಕಥೆ