ಸುಮಾಳ ಕನಸಿನ ಕಾರು

 ಬಾಲ್ಯದಿಂದಲೂ ಸುಮಾಗೆ ಸ್ವಂತ ಕಾರು ಹೊಂದುವ ಕನಸು. ಕಾರನ್ನು ನೋಡಿದಾಗಲೆಲ್ಲಾ ಅವಳಿಗೆ ಆಕರ್ಷಣೆ ಮೂಡುತ್ತಿತ್ತು. ಚೆನ್ನಾಗಿ ಓದಿದರೆ ಮುಂದೊಂದು ದಿನ ಕಾರು ಕೊಳ್ಳಬಹುದು ಎಂದುಕೊಂಡಳು. 10 ನೇ ತರಗತಿಯಲ್ಲಿ, ಅವಳು ಕಷ್ಟಪಟ್ಟು ಓದಿದಳು, ಆದರೆ ಅವಳ ತಂದೆ ಮುಂದೆ ಓದಲು ಬಿಡಲಿಲ್ಲ. ಅದರ ನಂತರ, ಅವಳು ಹಣ ಸಂಪಾದಿಸಲು ಬೀಡಿ ಕಟ್ಟಿ,ದುಡ್ಡು ಉಳಿಸಲು ಪ್ರಾರಂಭಿಸಿದಳು.ಅಂತಿಮವಾಗಿ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಿ ಮತ್ತು ಅದನ್ನು ಚಲಾಯಿಸಲು ಪ್ರಾರಂಭಿಸಿದಳು.ಯಾರೋ ಆಕೆಗೆ ಕಾರನ್ನು ಉಡುಗೊರೆಯಾಗಿ ನೀಡಿರಬೇಕು ಎಂದು ಜನರು ಗಾಸಿಪ್ ಪ್ರಾರಂಭಿಸಿದರು.ಕಾರಿಗೆ ಖರ್ಚು ಮಾಡುವ ಬದಲು  ಮದುವೆಗೆ ಆಗುತಿತ್ತು.

ನಿರಾಸೆಯಿಂದ ಸುಮಾ ಕಾರು ಮಾರಿದಳು. ಎಲ್ಲರೂ ಮತ್ತೆ ಮಾತನಾಡಲಾರಂಭಿಸಿದರು.ಇದರಿಂದ ದುಃಖಿತಳಾದಳು. "ನನಗೆ ಇಷ್ಟವಾದದ್ದನ್ನು ನಾನು ಮಾಡಲಾರೆ" ಎಂದು ಯೋಚಿಸಿದಳು.ಇದನ್ನು ಕಂಡ  ತಂದೆ ತನ್ನ ತಪ್ಪನ್ನು ಅರಿತು ಅವಳ ಕನಸುಗಳನ್ನು  ಪ್ರೋತ್ಸಾಹಿಸಲು ಪ್ರಾರಂಭಿಸಿದರು.

ಈಗ ಅವಳು ಅವಳ ಮದುವೆಗೆ ಮತ್ತು ವರದಕ್ಷಿಣೆಯಾಗಿ ಭಾವಿ ಗಂಡನಿಗೆ ಕಾರ್ ಗಿಫ್ಟ್ ಮಾಡಿದಳು.

Comments

Popular posts from this blog

ದೂರದ ಅಭಿಲಾಷೆಯಿಂದ, ಇರುವುದುನು ಮರೆತೇವಾ?

ಎಲ್ಲಿ ಜಾರಿತು ಮನ?

ಕೇಶವನ ಕನಸು ಸಾಕಾರ: ಕಮಲಾಳ ಹೋರಾಟದ ಕಥೆ