ಕಾಂತಾರದ ಅನುಭವದಲ್ಲಿ ಮಂಗಲತಿಯ ನೆನಪು

 ಎಂತಹ ಶಿಸ್ತಿನ ಸಾಲು! 30 ರಿಂದ 35 ಒಟ್ಟಿಗೆ ಹೋಗುತ್ತವೆ.ಗಂಗಾ, ಪೂಜಾ, ಮಂಗಲತಿ, ಗೌರಿ, ಲಕ್ಷ್ಮಿ, ಗುಂಡ, ಕರಿಯ, ನಂದಿ, ಪುಣ್ಯ, ಕಾಳಿ.... ಬೆಳಿಗ್ಗೆ ಆಹಾರವನ್ನು ತಿಂದು.ಪ್ರತಿದಿನವೂ ಕಾಡಿಗೆ ಜಮ್ಮಿ ಮತ್ತು ರಾಖಿಯೊಂದಿಗೆ ಹೋಗುವುದು. ಓಡುತ್ತಾ, ಮಣ್ಣಿನ ಗುಡ್ಡೆ ಮೇಲೆ ಹಾರುತ್ತಾ, ಹಾಯಿತ್ತಾ ತಲೆಗೆ ಮಣ್ಣು ಮೆತ್ತಿಸಿಕೊಂಡು, ಓಡುವುದು,   ಅದೆಂಥ ವಿನೋದ.ಜೊತೆಗೆ ಬೆಳ್ಳಕ್ಕಿಗಳು, ನಕ್ಕು ನಕ್ಕು ಸಾಕಾಗುತ್ತಿತ್ತು.

ಅಂದು ಚಳಿಗಾಲ,ಹುಲ್ಲು ಬೆಳೆಯುವ ಸಮಯ, ಚಳಿಯ ಹಿಮದಲ್ಲಿಯೂ ತಮ್ಮ ಪ್ರತಿದಿನ  ದಿನಚರಿ ಬೆಳಿಗ್ಗೆ 7:30 ರಿಂದ 8 ಗಂಟೆ  ಕಾಡಿಗೆ ಹೋಗುವುದು. ಸಂಜೆ 4 ರಿಂದ 4:30 ರ ಸುಮಾರಿಗೆ ಮನೆಗೆ ಹಿಂದಿರುಗುವುದು.ಗೇಟ್ ಮುಂದೆ ನಿಂತು,ಅಂಬಾ" ಎಂದು ಕರೆದು ಕೊಟ್ಟಿಗೆ ಮನೆಗೆ ಪ್ರವೇಶಿಸ.

ಒಂದು ದಿನ, ಮಂಗಲತಿ ಕಾಡಿನಿಂದ ಹಿಂತಿರುಗಲಿಲ್ಲ.ಹುಲ್ಲು ಚೆನ್ನಾಗಿ ಬೆಳೆಯುತ್ತಿದ್ದರಿಂದ ಅವಳು ಹೊರಗೇ ಇರಬಹುದೆಂದು ನಾವು ಭಾವಿಸಿದ್ದೇವು.ಮರುದಿನವೂ ಸಹ ಹಿಂತಿರುಗದಿದ್ದಾಗ,  ತಾಯಿ ಮತ್ತು ನಾನು ಅವಳನ್ನು ಹುಡುಕಲು ಪ್ರಾರಂಭಿಸಿದೆವು.ಕಲ್ಕುಡ ದೈವಸ್ಥಾನದ ಬನ ಒಳಗೆ ಇರುವುದು ಕಾಣಿತು.ನಾವು ಬನದ ಒಳಗೆ ಹೋಗುದಿಲ್ಲ.ನಾವು ಅವಳ ಹೆಸರನ್ನು ಕರೆದಾಗ, ಅವಳು ತನ್ನ ಮುಖವನ್ನು ಎತ್ತಿ ನೋಡಿದಳು, ಅವಳ ದೇಹವು ನಡುಗುತಿತ್ತು. ಕಾಂತಾರ ಸಿನಿಮಾದ ದೃಶ್ಯದಲ್ಲಿ ಇದ್ದಂತೆ ಆವೇಶಾದಿದ್ದಳು.

ಇದನ್ನು ನೋಡಿದ ನಾವು ವೆಂಕು ಪಂಡಿತ್ ಕರೆದು, ಅವರು ಮಂಗಲತಿ ದೇಹಕ್ಕೆ  ಅರಿಶಿನ, ಕುಂಕುಮವನ್ನು ನೀರು ಸಿಂಪಡಿಸಿದಾಗ.ಸ್ವಲ್ಪ ದೂರ ಓಡಿ ಮತ್ತೆ ಬೀಳುತಿದ್ದಳು.ಹೀಗೆ ಕಲ್ಲು ಬೇರುಗಳ ಮೇಲೆ ಹೊರಳಾಡುತ್ತಾ ಮನೆಗೆ ಬಂದು ನಿಂತಳು.

ಅವಳ ಆವೇಶ  ಮಾತ್ರ ಇನ್ನು ಕಮ್ಮಿ ಆಗಿರಲಿಲ್ಲ.ಇದನ್ನು ನೋಡಿದ ತಂದೆ ಕಲ್ಕುಡನನ್ನು ನೆನೆದು ಎಳನೀರು ಕೊಡುವಂತೆ ಪ್ರಾರ್ಥಿಸಿದರು.

ನಿಧಾನವಾಗಿ ಮೈನಡುಕ ಅವಳ ನಿಂತಿತ್ತು,ಆವೇಶ ಕಡಿಮೆಆಯಿತು,ನಿಧಾನವಾಗಿ ಶಾಂತಳಾದಳು.ನಂತರ ಹುಲ್ಲು ತಿಂದು ನೀರು ಕುಡಿದು ಮಲಗಿದಳು.

Comments

Popular posts from this blog

ಆ ದಿನಗಳು

ಕೇಶವನ ಕನಸು ಸಾಕಾರ: ಕಮಲಾಳ ಹೋರಾಟದ ಕಥೆ

ರೈಲು ಪ್ರಯಾಣ