ಎಳೆಯ ವಯಸ್ಸಿನಲ್ಲಿ ದೊಡ್ಡ ಕನಸು

 ಸಾರಾಂಶ:

ಪ್ರವೀಣ್ ಇಷ್ಟು ಚಿಕ್ಕ ವಯಸ್ಸಿನಲ್ಲೇ ದೊಡ್ಡ ಕನಸು ಕಂಡು, ದುಡಿಮೆ ಮಾಡಿ ತಾನು, ತನ್ನ ತಂಗಿಯರು ಮತ್ತು ತನ್ನ ಕುಟುಂಬವನ್ನು ಬೆಳೆಸಿದ ಕಥೆ

ಪ್ರವೀಣ್ ತಂದೆ ಕೋಟಿಯಪ್ಪ ರಾಮಯ್ಯನ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ರಾಮಯ್ಯ ಅವರ ಮಗ ರಂಜೀತ್ ಮತ್ತು ಪ್ರವೀಣ್ ಒಂದೇ ವಯಸ್ಸಿನವರು. ಯಾವಾಗಲೂ ಪ್ರವೀಣ್ಗೆ ರಂಜೀತ್ ಹಳೆಯ ಬಟ್ಟೆ ಕೊಡುವರು, ಹಾಗಾಗಿ ಬಟ್ಟೆಗೆ ಕೊರತೆ ಇರಲಿಲ್ಲ. ಆದರೂ, ಪ್ರವೀಣ್‌ಗೆ ಇದು ಇಷ್ಟವಾಗುತ್ತಿರಲಿಲ್ಲ.

ಯಾವಾಗಲೂ ರಾಮಯ್ಯ ಅವರಿಗೆ ಸಿಗುವ ಮರ್ಯಾದಿ ಪ್ರವೀಣ್ ಮೇಲೆ ದೊಡ್ಡ ಪ್ರಭಾವ ಬೀರುತ್ತಿತ್ತು. ಪ್ರತಿ ಬಾರಿಗೆ, "ನಾನು ಕೂಡ ಹಾಗೆ ಆಗಬೇಕು" ಎಂದು ಕನಸು ಕಾಣುತ್ತಿದ್ದ. ಆದರೆ, ಅವನ ತಂದೆ ಕೋಟಿಯಪ್ಪ ಯಾವಾಗಲೂ "ಶ್ರೀಮಂತ ಯಾವಾಗಲೂ ಶ್ರೀಮಂತ" ಎಂದು ಹೇಳುತ್ತಿದ್ದನು, ಅದನ್ನು ಪ್ರವೀಣ್ ಒಪ್ಪಿಕೊಳ್ಳುವುದಿಲ್ಲ. ಪ್ರವೀಣ್ ತಂದೆಯೊಂದಿಗೆ ಕೆಲಸಕ್ಕೆ ಹೋಗುತ್ತಾನೆ.

ಪ್ರವೀಣ್‌ಗೆ 3 ತಂಗಿಯರು ಇದ್ದರು. ಮೊದಲ ತಂಗಿ ಪ್ರಮೀಳಾ ಉತ್ತಮ ಅಂಕಗಳನ್ನು ಪಡೆದಿದ್ದಳು, ಆದರೆ ಉನ್ನತ ಶಿಕ್ಷಣಕ್ಕೆ ಆರ್ಥಿಕ ಸಮಸ್ಯೆ ಎದುರಿಸಬೇಕಾಯಿತು. ಪ್ರವೀಣ್, ರಾಮಯ್ಯ ಅವರಲ್ಲಿ ಸಹಾಯ ಕೇಳಿ ಎಂದು ತಂದೆಗೆ ಹೇಳಿದ. ಆದರೆ, ಕೋಟಿಯಪ್ಪ "ಸಹಾಯ ಕೇಳಿದರೆ, ಮಕ್ಕಳನ್ನು ಹೆಚ್ಚು ವಿದ್ಯಾಭ್ಯಾಸ ಮಾಡಿಸಿದರೆ, ನೀನು ಮುಂದೆ ಅವರ ಗಂಟುಮೂಟೆ ಹೊರಬೇಕಾಗುತ್ತದೆ" ಎಂದರು.

ಆದರೆ, ಪ್ರವೀಣ್ ಜವಾಬ್ದಾರಿಯನ್ನು ತೆಗೆದುಕೊಂಡು ತನ್ನ 3 ಸಹೋದರಿಯರನ್ನು ಶಾಲೆಗೆ ಕಳುಹಿಸಿದ. ಈಗ 3 ಸಹೋದರಿಯರೂ ಶಿಕ್ಷಣವನ್ನು ಪೂರ್ಣಗೊಳಿಸಿ, ಪ್ರಮೀಳಾ ಟೀಚರ್, 2ನೇ ಸಹೋದರಿ ಪರಿಮಳಾ ಬ್ಯಾಂಕ್ ಮ್ಯಾನೇಜರ್, ಮತ್ತು 3ನೇ ಸಹೋದರಿ ಪ್ರತಿಮಾ ಇಂಜಿನಿಯರ್ ಆಗಿದ್ದಾರೆ. ಪ್ರವೀಣ್ ಅವರ ಮದುವೆಯನ್ನೂ ಮಾಡಿಸಿದ್ದ.

ಈಗ ಕೋಟಿಯಪ್ಪನಿಗೆ ಹೆಮ್ಮೆ ಅನಿಸುತ್ತದೆ. ಪ್ರವೀಣ್ ಡಿಗ್ರಿ ಮುಗಿಸಿಲ್ಲ ಆದರೂ, ಈಗ ಒಳ್ಳೆಯ ಉದ್ಯಮಿಯಾಗಿದ್ದಾನೆ.


Comments

Popular posts from this blog

ಆ ದಿನಗಳು

ಕೇಶವನ ಕನಸು ಸಾಕಾರ: ಕಮಲಾಳ ಹೋರಾಟದ ಕಥೆ

ರೈಲು ಪ್ರಯಾಣ