ಯಾವ ಕೆಲಸಕ್ಕೂ ಅಡಿಯಿಲ್ಲ ಮನಸಿರಬೇಕು (ಯಾವುದೇ ಕೆಲಸ ಕಷ್ಟವಾಗದು, ಮನಸ್ಸು ಬೇಕು)

 ಸಾರಾಂಶ:

ಈ ಕಥೆ, ತಮ್ಮ ಗುರಿಗಳನ್ನು ಸಾಧಿಸಲು ತೀವ್ರ ನಿಷ್ಠೆ ಮತ್ತು ನಿರ್ಧಾರಶೀಲತೆಯ ಅಗತ್ಯವಿದೆ ಎಂಬುದನ್ನು ತೋರಿಸುತ್ತದೆ. ತನ್ನ ಸಮಾಧಾನ ಮತ್ತು ಆತ್ಮವಿಶ್ವಾಸದಿಂದ,  ಅಡೆತಡೆಗಳನ್ನು ಮೀರಿ, ತನ್ನ ಕನಸು ಮುಟ್ಟಲು ಯಶಸ್ವಿಯಾಗುತ್ತದೆ.

ಸಂಧ್ಯಾ ಸರ್ಕಾರಿ ನೌಕರಿ ಪಡೆಯುವ ಕನಸು. ಅವಳು ಈಗಾಗಲೇ ಮೂರು ಬಾರಿ ಪರೀಕ್ಷೆಗೆ ಹಾಜರಾಗಿದ್ದಳು, ಪ್ರತಿ ಬಾರಿ ಕೆಲವೇ ಅಂಕಗಳಿಂದ ಅವಕಾಶವನ್ನು ಕಳೆದುಕೊಂಡಳು.ಈಗಾಗಲೇ ಮೂರು ವರ್ಷ ಸಮಯ ವ್ಯರ್ಥವಾಗಿದೆ, ಈ ವರ್ಷ ಆಕೆಗೆ ಕೊನೆಯ ಅವಕಾಶ.

ಪರೀಕ್ಷೆಯ ದಿನಾಂಕಗಳನ್ನು ಘೋಷಿಸಲಾಯಿತು, ಆದರೆ ಪರೀಕ್ಷೆಗೆ ಒಂದು ವಾರ ಬಾಕಿ ಇರುವಷ್ಟರಲ್ಲಿ ಸಂಧ್ಯಾಳಿಗೆ ಸಿ-ಸೆಕ್ಷನ್ ಆಗಿ ಮಗು ಹುಟ್ಟಿತು.ಪರೀಕ್ಷೆ ಬರೆಯುವುದು ಹೇಗೆ ಎಂದು ಚಿಂತಿಸುತ್ತಾ ಖಿನ್ನತೆಗೆ ಒಳಗಾದಳು,ಈ ಸಂದರ್ಭದಲ್ಲಿ, ಆಕೆ ಕುಳಿತುಕೊಳ್ಳಲು ಕೂಡಾ ಸಾಧ್ಯವಾಗುತ್ತಿಲ್ಲ, ಮಗುವಿನ ಹಸಿವು ತೀರಿಸಲು ತುಂಬಾ ಕಷ್ಟವಾಗುತ್ತಿತ್ತು.

ಪರೀಕ್ಷೆಯ ಹಿಂದಿನ ರಾತ್ರಿ, ಸಂಧ್ಯಾ ತಯಾರಿ ಮಾಡಲು ಪ್ರಯತ್ನಿಸಿದಳು, ಆದರೆ ಮಗು ಜೋರಾಗಿ ಅಳುತ್ತಲೇ ಇತ್ತು.ಆಕೆಯ ಮನೆಯವರು ಪರೀಕ್ಷೆಗೆ ಹಾಜರಾಗಬೇಡ ಎಂದು ಸಲಹೆ ನೀಡಿದರು. ಯಾಕಂದ್ರೆ ಆಕೆಗೆ ಮಾಡಲಾಗುವುದಿಲ್ಲ ಅನ್ನೋ ಭಾವನೆ ಅವರಿಗಿತ್ತು.3 ವರ್ಷ ತುಂಬಾ ಕಷ್ಟಪಟ್ಟು ಓದಿ, ಈಗ ಅವಳಿಗೆ ಎಲ್ಲವನ್ನೂ ಕಳೆದುಕೊಂಡಂತೆ ಭಾಸವಾಯಿತು. ಆ ರಾತ್ರಿ ಸಂಧ್ಯಾ ನಿದ್ರೆ ಮಾಡಲಿಲ್ಲ.

ಇದ್ದಕ್ಕಿದ್ದಂತೆ ಬೆಳಿಗ್ಗೆ 8 ಗಂಟೆಗೆ ನಾನು ಪರೀಕ್ಷೆ ಬರೆಯಬೇಕು ಎಂದು ನಿರ್ಧರಿಸಿದಳು.ಪರೀಕ್ಷೆ 9 ಗಂಟೆಗೆ ಮತ್ತು ಪರೀಕ್ಷಾ ಕೇಂದ್ರಕ್ಕೆ ಒಂದು ಗಂಟೆ ಪ್ರಯಾಣ.ಮಗುವಿಗೆ ಸಹಾಯ ಮಾಡಲು ತನ್ನ ತಾಯಿಯನ್ನು ಕರೆದುಕೊಂಡು ಪರೀಕ್ಷೆ ಕೇಂದ್ರಕ್ಕೆ ಮಗುವನ್ನು ಹೊತ್ತೊಯ್ದಳು. ನೋವಿನ ನಡುವೆಯೂ ಹಾಲು ಸಂಗ್ರಹಿಸಲು ನಿಪ್ಪಲ್ ಶೀಲ್ಡ್ ಬಳಸಿ ಮಗುವಿಗೆ ಹಾಲುಣಿಸಲು ಹೆಣಗಾಡಿದಳು. 

ಪರೀಕ್ಷೆಯ ಗಂಟೆ ಬಾರಿಸಿತು, ಅವಳು ಪರೀಕ್ಷಾ ಹಾಲ್‌ಗೆ ಧಾವಿಸಿದಳು. ಪರೀಕ್ಷೆ ಬರೆಯುವಾಗ ಮಗು ಅಳುತ್ತಿರಬಹುದೆಂದುಕೊಂಡು ಒಮ್ಮೊಮ್ಮೆ ವಿಚಲಿತಳಾಗಿದ್ದಳು. ಪರೀಕ್ಷೆಯ ಮೇಲೆ ಏಕಾಗ್ರತೆ ಮೂಡಿಸಲು ಸಾಕಷ್ಟು ಪ್ರಯತ್ನಿಸಿದಳು.

ಅಂತಿಮವಾಗಿ, ಪರೀಕ್ಷೆಯು ಕೊನೆಗೊಂಡಿತು, ಮತ್ತು ಬೋಧಕನು ಪತ್ರಿಕೆಗಳನ್ನು ಸಂಗ್ರಹಿಸಿದನು.ಸಂಧ್ಯಾಳಿಗೆ ತಾನು ಹೇಗೆ ಪರೀಕ್ಷೆ ಬರೆದಿದ್ದೆ ಎಂಬುದು ಗೊತ್ತಿರಲಿಲ್ಲ. ಆಕೆಯ ತಾಯಿ ಮತ್ತು ಮಗು 5 ನಿಮಿಷಗಳ ದೂರದಲ್ಲಿ ಕಾಯುತ್ತಿದ್ದರು. ಇದ್ದಕ್ಕಿದ್ದಂತೆ, ಮಗು ಅಳಲು ಪ್ರಾರಂಭಿಸಿತು, ಮತ್ತು ಸಂಧ್ಯಾ ಕೋಣೆಗೆ ಓಡಿದಳು. 

ತಾಯಿ ನಗುತ್ತಾ ಹೇಳಿದರು: "ನಿನ್ನ ಮಗು ಕೂಡಾ ನೀನು ಪರೀಕ್ಷೆ ಬರೀತಾ ಇದ್ದೀಯ ಅಂತ . 5 ನಿಮಿಷದ ಹಿಂದೆ ಎದ್ದ ಅಂದರು.

ಪರೀಕ್ಷೆಯ ಫಲಿತಾಂಶದ ಬಗ್ಗೆ ಸಂಧ್ಯಾಳಿಗೆ ಭಯವಿತ್ತು. ಆದರೆ 3 ವಾರಗಳ ನಂತರ, ಫಲಿತಾಂಶ ಹೊರಬಿದ್ದಿತು ಮತ್ತು ಸಂಧ್ಯಾಳಿಗೆ ಉದ್ಯೋಗ ಸಿಕ್ಕಿತು.



Comments

Popular posts from this blog

ಆ ದಿನಗಳು

ಕೇಶವನ ಕನಸು ಸಾಕಾರ: ಕಮಲಾಳ ಹೋರಾಟದ ಕಥೆ

ರೈಲು ಪ್ರಯಾಣ