ಈ ರಕ್ಷಾ ಬಂಧನದಂದು, ಬಾಲ್ಯದ ನೆನಪುಗಳು
ಸಂದೇಶ್ 3 ವರ್ಷದಾಗಿದ್ದಾಗ, ಅವನಿಗೆ ಸಂಧ್ಯಾ ಎಂಬ ಚಿಕ್ಕ ತಂಗಿ ಹುಟ್ಟಿದಳು. ಅವಳು ರಾತ್ರಿ 8 ಗಂಟೆಗೆ ಜನಿಸಿದಳು. ಸಂದೇಶ್ ತನ್ನ ತಾಯಿಯ ಪಕ್ಕದಲ್ಲಿ ಮಲಗಿದ್ದನು , ಅವನು ಎದ್ದು ತಾಯಿಯ ಮಡಿಲಲ್ಲಿ ಚಿಕ್ಕ ಮಗುವನ್ನು ನೋಡಿದ. ನೆರೆಯ ಅಕ್ಕ ಅಣ್ಣದ್ದಿರು ನಿನ್ನ ತಂಗಿ ಅಲ್ಲ ಅವಳು ಕಪ್ಪಾಗಿದಾಳೆ ಎಂದು ಜೇಡಿಸಿದರು.ಅದಕ್ಕೆ ಅಳುತ್ತಾ ಕುಳಿತಿದ್ದ ಸಂದೇಶ್.ಅವಾಗ ಅವನ ಅಜ್ಜಿ ಅಬುಜಾ, ಆ ಮಗುವನ್ನು ಕೆರೆಯ ಬಳಿ ಕಂಡೆ ಎಂದು ಅವನಿಗೆ ಹೇಳಿದಳು. ಇದನ್ನು ನಂಬಿದ ಸಂದೇಶ್, ತನ್ನ ಅಜ್ಜಿ ಕೆರೆಯ ಬಳಿಯಿಂದ ಮಗುವನ್ನು ತಂದಳು ಎಂದು ಎಲ್ಲರಿಗೆ ಹೇಳಿದ. ಅದಕ್ಕೆ ಕಪ್ಪುಗಿದ್ದಾಳೆ ಎಂದು ಮುದ್ದಾಗಿ ಹೇಳುತ್ತಿದ್ದ.ಸಂಧ್ಯಾಳ ಮೇಲೆ ಸಂದೇಶ್ ತುಂಬಾ ಕಾಳಜಿ ವಹಿಸಿದ್ದ , ಮತ್ತು ಅವನು ತನ್ನ ತಂಗಿಯನ್ನು ಶಾಲೆಗೆ ಕರೆದುಕೊಂಡು ಹೋಗುವಾಗ ಯಾರಿಗೂ ಅವಳನ್ನು ಮುಟ್ಟಲು ಬಿಡುತ್ತಿರಲಿಲ್ಲ.