ಪ್ರಪಂಚದಾಚೆ ಕನಸುಗಳ ಹಾದಿ: ಅಂತ್ಯದಲ್ಲಿ ಖಾಲಿಹಸ್ತ
ಸಂದೇಶ್‌ಗೆ ಇಬ್ಬರು ಸಹೋದರರು ಮತ್ತು ನಾಲ್ವರು ಸಹೋದರಿಯರು.ಅಣ್ಣ ಸಂಜಯ್, ತಮ್ಮ ಸಂತೋಷ್.ಸಂಧ್ಯಾ, ಸವಿತಾ, ಸುಮಿತ್ರಾ ಮತ್ತು ಸುಜಾತ ತಂಗಿಯರು.
ಸಹೋದರರಿಗೆ ಅಧ್ಯಯನದಲ್ಲಿ ಆಸಕ್ತಿ ಇರಲಿಲ್ಲ.10 ನೇ ತರಗತಿಯಲ್ಲಿ ಅನುತ್ತೀರ್ಣ.ಆದರೆ ಸಂದೇಶಗೆ ಓದಲು ತುಂಬಾ ಆಸಕ್ತಿ.ಡಿಪ್ಲೊಮಾವನ್ನು ಮುಗಿಸಿದ.ಆದರೆ ತಂದೆ ತಂಗಿಯರಿಗೆ ಓದಲು ಅವಕಾಶ ನೀಡಲಿಲ್ಲ.
ಸುದೇಶ್‌ಗೆ ವಿದೇಶದಲ್ಲಿ ಕೆಲಸ ಸಿಕ್ಕಿತು.ಅದು ಅವನ ಜವಾಬ್ದಾರಿಯನ್ನು ಹೆಚ್ಚಿಸಿತು.ಸಂಜಯ್ ವ್ಯಾಪಾರ ಆರಂಭಿಸಲು, ಮನೆ ಕಟ್ಟಿಲು,ಹಣ ಕೇಳಿದರು.ಮದುವೆಯೂ ಆಯಿತು.
ಆದರೆ, ಸಂಜಯ್ ಕುಟುಂಬದ ಯಾವುದೇ ಜವಾಬ್ದಾರಿಯನ್ನು ಹೊರಲು ಸಿದ್ಧರಿರಲಿಲ್ಲ. ತಂಗಿಯರ ಮದುವೆ ಮಾಡುವ ಜವಾಬ್ದಾರಿಯೂ ಸಂದೇಶ್ ಮೇಲೆ ಬಿದ್ದಿತ್ತು.
ಮೊದಲ ತಂಗಿ ಸಂಧ್ಯಾಳ ಮದುವೆ. ಆ ಸಮಯದಲ್ಲಿ ತಾಯಿ ಕಮಲಾ ಅನಾರೋಗ್ಯ ಸಂದೇಶ್ ಚಿಕಿತ್ಸೆಗೆ ಸಾಕಷ್ಟು ಹಣವನ್ನು ಖರ್ಚು ಮಾಡಿದ, ಆದರೆ ದುರದೃಷ್ಟವಶಾತ್ ಅವರು ನಿಧನರಾದರು.
ಈಗ, ಸಂದೇಶನ ಬಳಿ ಹಣವಿಲ್ಲ, ಆದರೆ ಅವನು ಇನ್ನೂ ತನ್ನ ಉಳಿದ ಮೂವರು ತಂಗಿಯರ ಮದುವೆಯನ್ನು ಮಾಡಬೇಕಾಗಿತ್ತು.
ತಮ್ಮಸಂತೋಷ್ ಭವಿಷ್ಯದಲ್ಲಿ ತನಗೆ ಬೆಂಬಲ ನೀಡುತ್ತಾನೆ ಎಂದು ಅವರು ಭಾವಿಸಿ. ಸಂತೋಷ್‌ಗಾಗಿ ಆಟೋ ರಿಕ್ಷಾವನ್ನು ಸಹ ಖರೀದಿಸಿದ.
ಸಂದೇಶ್ ವರದಕ್ಷಿಣೆ ತೆಗೆದುಕೊಂಡು ತನ್ನ ಎರಡನೇ ತಂಗಿ ಸವಿತಾಳ ಮದುವೆಯನ್ನು ಏರ್ಪಡಿಸಿದ್ದ.ಸಂತೋಷ್ ಗೆ ಮದುವೆ ಮಾಡಿಸಿ ಮೂರನೇ ತಂಗಿ ಸುಮಿತ್ರಾಳ ಮದುವೆ ಮಾಡಿಸಬೇಕೆಂದು ಯೋಚಿಸಿದ್ದ.ಆದರೆ ಸಂತೋಷ್ ಒಪ್ಪಲಿಲ್ಲ, ಎಲ್ಲಾ ತಂಗಿಯರ ಮದುವೆಯನ್ನು ತನ್ನ ಮದುವೆಗಿಂತ ಮೊದಲು ಮುಗಿಸಬೇಕು ಎಂದು ಒತ್ತಾಯಿಸಿದ.ಸಂತೋಷ್ ಮದುವೆಗೆ ಬೆಂಬಲ ನೀಡಲು ನಿರಾಕರಿಸಿದ.ಮತ್ತೆ ಸಂದೇಶ್ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡು ಮದುವೆಗಳನ್ನು ಮುಗಿಸಿದ.
ಸ್ವಲ್ಪ ಸಮಯದ ನಂತರ ಸಂದೇಶ್ ಗೆ ಸಂತೋಷ್ ದೀಕ್ಷಾ ಎಂಬ ಹುಡುಗಿಯನ್ನು ಪ್ರೀತಿಸುತ್ತಿರುವುದು ಗೊತ್ತಾಯಿತು. ಸಂತೋಷ್ ಸುಜಾತಾಳ ಮದುವೆಗೆ ಕಾಯದೆ ತಾನೇ ಮದುವೆಯಾದ. ದೈಹಿಕ ನ್ಯೂನತೆ ಹೊಂದಿರುವ ಸುಜಾತಾಳ ಬೆಂಬಲಿಸಲು ಯಾರೂ ಇರಲಿಲ್ಲ. ಮತ್ತೊಮ್ಮೆ ಸಂದೇಶ್ ಸಂಪೂರ್ಣ ಜವಾಬ್ದಾರಿ ವಹಿಸಿ ಅವಳ ಮದುವೆಯನ್ನೂ ಮಾಡಿಸಿದ.
ಕೊನೆಗೆ ತನ್ನೆಲ್ಲ ಪ್ರಯತ್ನ, ತ್ಯಾಗಗಳ ನಡುವೆಯೂ ಸಂದೇಶ್ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಯಾರ ಬೆಂಬಲವೂ ಸಿಗಲಿಲ್ಲ.
ಕುಟುಂಬದಲ್ಲಿ ಎಲ್ಲರೂ ಜಮೀನು ಮತ್ತು ಮನೆಗಳನ್ನು ಹೊಂದಿದ್ದಾರೆ, ಸಂದೇಶ್‌ಗೆ ಏನೂ ಇಲ್ಲ. ಸ್ವಂತ ಮನೆ ಕೂಡ ಇಲ್ಲ ಇವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.
Comments