ಹೊಸ ಹಾದಿಯ ಕನಸು 5

 ರಾಣಿಯ ಕನಸುಗಳು, ಆಕೆಯ ಹೊಸ ಹಾದಿಗೆ ಒಂದು ಹೊಸ ದಾರಿ ತೋರಿಸುತ್ತಿದ್ದವು. ಬಸ್‌ ಸಾಗುತ್ತಿದ್ದಂತೆ, ಅವಳ ಯೋಚನೆಗಳು ಇನ್ನಷ್ಟು ಗಾಢವಾಗುತ್ತಿದ್ದವು. ಹೊಸ ಪರಿಸರ, ಹೊಸ ಜೀವನ, ಹೊಸ ಗುರಿಗಳು—ಎಲ್ಲವನ್ನೂ ತಲುಪುವ ಹಂಬಲದಲ್ಲಿ, ರಾಣಿ ತನ್ನ ಎದೆಗೆ ಧೈರ್ಯ ತುಂಬಿಕೊಳ್ಳುತ್ತಾಳೆ. 'ನಾವು ಇಲ್ಲಿ ಬಂದಿರುವುದು ಒಂದು ಹೊಸ ಆರಂಭದ ಗುರುತು' ಎಂದುಕೊಂಡಳು.

ಹಠಾತ್ ರಾಣಿಗೆ ಹೊಟ್ಟೆ ತೊಳಲಾಯಿತು, ಒವ್ವೇಲೆ ವಾಂತಿ ಬರುವಂತಾಯಿತು.ಆಗ ಬಸ್ ನಿಧಾನವಾಗಿ ಬ್ರೇಕ್ ಹಾಕಿ, ಕೊನೆಯ ಬಸ್ ಸ್ಟಾಪ್‌ನಲ್ಲಿ ನಿಂತಿತು.

ಅಪ್ಪ ಶಿವಪ್ಪ, 'ಏನಾಯ್ತು?' ಎಂದು ಕೇಳಿದಾಗ, ರಾಣಿ ಸ್ವಲ್ಪ ಹೊತ್ತು ಹಾಗೆ ಕುಳಿತುಕೊಂಡು ಸಹಿಸಿಕೊಳ್ಳುತ್ತಾಳೆ. ಎಲ್ಲರೂ ಬಸ್ಸಿನಿಂದ ಇಳಿದ ನಂತರ, ನಿಧಾನವಾಗಿ ಇಳಿದು, ಅಪ್ಪನ ಹಿಂದೆ ನಡೆಯತೊಡಗಿದಳು.ಅವರು ಮೀನು ಮಾರುಕಟ್ಟೆಯ ಮಧ್ಯೆ ಸಣ್ಣ ಹಾದಿಯಲ್ಲಿ ಹೋಗುತ್ತಿರುವಾಗ, ಅಲ್ಲಿನ ವಾಸನೆಗೆ ರಾಣಿಗೆ ಮತ್ತೊಮ್ಮೆ ಹೊಟ್ಟೆ ತೊಳಲಾಯಿತು. ಅದಕ್ಕಾಗಿ ಟವೆಲ್ ಮೂಗು ಬಾಯಿಗೆ ಭದ್ರವಾಗಿ ಮುಚ್ಚಿಕೊಂಡಳು.ಅದನ್ನು ಕಂಡು ಮೀನು ಮಾರುವ ಹೆಂಗಸೊಬ್ಬಳು ಮುಖ-ಬಾಯಿ ಮುಚ್ಚಿಕೊಂಡು ಈ ದಾರಿಯಲ್ಲಿ ಯಾಕೆ ಬರಬೇಕಾಗಿತ್ತು' ಎಂದಳು.

ರಾಣಿಗೆ, 'ಅಬ್ಬಾ! ಎಷ್ಟು ದೂರ ನಡೆಯಬೇಕೆಂದು?' ಅನ್ನಿಸಿತು. ಕೊನೆಗೆ ಆ ಹಾದಿಯನ್ನು ದಾಟಿ, ಹೊರಗಿನ ರಸ್ತೆಗೆ ಬಂದು ನಿಂತರು. ರಸ್ತೆಯ ಸಂದು ದಾಟಿ, ಗಬ್ಬನೆ ಹೊಟ್ಟೆ ಹಿಡಿದು ವಾಂತಿ ಮಾಡಲಾರಂಭಿಸಿದಳು.ಅಪ್ಪ ಬಾಟಲ್ ತೆಗೆದು ನೀರು ಕುಡಿಯಲು ಹೇಳಿದರು.

ಬಸ್ ಪ್ರಯಾಣಕ್ಕೆ ಅಭ್ಯಾಸವಿಲ್ಲದ ರಾಣಿಗೆ, ಪ್ರಯಾಣ ತುಂಬಾ ಆಯಾಸವಾಗಿತ್ತು.ಬೆಳಿಗ್ಗೆ ಸ್ವಲ್ಪ ತಿಂದು ಓಡಿ ಬಂದಿದ್ದಳು.ಅದೂ ಹೊಟ್ಟೆ ಖಾಲಿಯಾಯಿತು.

ಅಪ್ಪ, 'ಏನಾದರೂ ತಿಂದು ಹೋಗೋಣಾ?' ಎಂದಾಗ, 'ಏನಾದರೂ ತಿಂದರೆ ಮತ್ತೆ ವಾಂತಿ ಆಗುತ್ತೆ' ಎಂದಳು ರಾಣಿ.ಅಪ್ಪ ಎಳ್ಳುನೀರು ಕೊಡಿಸಿದರು.

ಮತ್ತೆ ನಗರದಿಂದ ಕಾಲೇಜಿಗೆ ಹೋಗಲು ನಂಬರ್ ಬಸ್ ಹತ್ತಿದರು.

ಮುಂದುವರೆಯುವುದು.....

Comments

Popular posts from this blog

ದೂರದ ಅಭಿಲಾಷೆಯಿಂದ, ಇರುವುದುನು ಮರೆತೇವಾ?

ಎಲ್ಲಿ ಜಾರಿತು ಮನ?

ಕೇಶವನ ಕನಸು ಸಾಕಾರ: ಕಮಲಾಳ ಹೋರಾಟದ ಕಥೆ