ಜಾತಕದ ವಾಸ್ತವ ಮತ್ತು ಸತ್ಯದ ಬೆಳಕು

 ನಮ್ಮ ಹಳ್ಳಿಯ ತಂಗಾಳಿ ಯಾವಾಗಲೂ ಮನಸ್ಸಿಗೆ ಚೈತನ್ಯ ತುಂಬುವಂತಹುದಾಗಿತ್ತು.ನಮ್ಮ ಮಧ್ಯಮವರ್ಗದ ಮನೆ ಸದಾ ಸಂತೋಷದಿಂದ ತುಂಬಿರುತ್ತಿತ್ತು, ಆದರೆ ಕೆಲವೊಮ್ಮೆ ಜೀವನ ತನ್ನದೇ ಆದ ಸವಾಲುಗಳನ್ನು ನಮ್ಮ ಮುಂದೆ ತಂದಿತ್ತು.

ನನ್ನ ಜನನಕ್ಕೆ, ನಮ್ಮ ಕುಟುಂಬದಲ್ಲಿ ಹೊಸ ಆಶಾಕಿರಣ ಹೊಳೆಯಿತು. "ಈ ಮಗುವಿನ ಜಾತಕ ಶ್ರೇಷ್ಠ, ಇದರಿಂದ ಕುಟುಂಬದಲ್ಲಿ ಪುಣ್ಯ ಬರುತ್ತದೆ" ಎಂದು ತಂದೆ ಜ್ಯೋತಿಷ್ಯ ಹೇಳಿಕೆಗೆ ಭರವಸೆ ಇಟ್ಟುಕೊಂಡಿದ್ದರು.

ಆದರೆ, ನನ್ನ ಎರಡನೇ ಅಕ್ಕ ಸಾವಿತ್ರಿ ಹುಟ್ಟಿದಾಗ, ಪರಿಸ್ಥಿತಿ ಬದಲಾಗಿತ್ತು. ಅವಳ ಜಾತಕ ತಂದೆಗೆ ಅಸಹಜವಾಗಿದ್ದಂತೆ ಕಾಣಿಸಿತು. 'ಈ ಜಾತಕ ಒಳ್ಳೆಯದಿಲ್ಲ,' ಎಂದು ಅವರು ನಿಶ್ಚಯಿಸಿ, ಕುಟುಂಬದ ಮೇಲೆ ಆರ್ಥಿಕ ಮತ್ತು  ಮಾನಸಿಕ ಒತ್ತಡವನ್ನು ಸೃಷ್ಠಿಸಿದರು.

ಸಮಯ ಸಾಗಿದಂತೆ, ತಂದೆ ಅವಳಲ್ಲಿ ಮತ್ತಷ್ಟು ಕಠಿಣ ಮನಸ್ಸು ಮಾಡಿಕೊಂಡರು. ಇಂಜಿನಿಯರಿಂಗ್ ಓದಲು ಸೇರಿದ್ದಾಗ, 'ಈಕೆ ನಮ್ಮ ಕುಟುಂಬಕ್ಕೆ ಹೊರೆ' ಎಂದು ಅವಳಿಗೆ ಹೀಯಾಳಿಸಿದರು.

ಆದರೆ ಸಾವಿತ್ರಿ ಅದನ್ನು ಮನದಟ್ಟು ಮಾಡಿಕೊಂಡಿಲ್ಲ. ಆಕೆ ಯಾವತ್ತೂ ಧೈರ್ಯವಂತಿಕೆ, ಪರಿಶ್ರಮ, ಮತ್ತು ತಾಳ್ಮೆಯ ಸಂಕೇತವಾಗಿದ್ದಳು. ಹಣಕಾಸಿನ ಸಮಸ್ಯೆಗಳನ್ನು ಹಾದುಹೋಗುತ್ತ, ಕೊನೆಗೆ ಆಕೆ ತನ್ನ ಕೆಲಸವನ್ನು ಗಳಿಸಿದರು. ಒಂದು ಕೆಲಸ ಮಾತ್ರವಲ್ಲ, ಆಕೆ ಇಡೀ ಕುಟುಂಬದ ಹೊಣೆಗಳನ್ನು ತನ್ನ ಮೇಲಾಗಿಸಿಕೊಂಡು, ಇಡೀ ಮನೆಯ ನಗು ತಂದುಕೊಟ್ಟಳು.

ತಂದೆ ನನಗೆ ಭಾಗ್ಯಶಾಲಿ ಎಂದು ಹೇಳುತ್ತಿದ್ದರು, ಆದರೆ ನನಗೆ ಮಾತ್ರ ಸ್ಪಷ್ಟವಾಗಿತ್ತು.ನಿಜವಾದ ಆಶೀರ್ವಾದ ಸಾವಿತ್ರಿ ಅಕ್ಕನೇ. ಅವಳ ಪರಿಶ್ರಮ, ತ್ಯಾಗ ಮತ್ತು ಕುಟುಂಬದ ಮೇಲಿನ ಪ್ರೀತಿ ನಮ್ಮ ಮನೆಯ ಬೆಳಕಾಗಿ ಹೊರಹೊಮ್ಮಿತು

ಈಗ ತಂದೆ ಸಂಪೂರ್ಣ ಬದಲಾಗಿದ್ದಾರೆ. ಜಾತಕದಿಂದ ಏನು? ಜೀವನವನ್ನು ನಿರ್ಮಿಸುವುದು ನಮ್ಮ ಕೈಯಲ್ಲಿದೆ ಎಂದು ನಂಬಿದ್ದಾರೆ.

Comments

Popular posts from this blog

ಆ ದಿನಗಳು

ರೈಲು ಪ್ರಯಾಣ

ಕೇಶವನ ಕನಸು ಸಾಕಾರ: ಕಮಲಾಳ ಹೋರಾಟದ ಕಥೆ