ಮುಗ್ಧತೆ ಮತ್ತು ಬದುಕಿನ ಪಾಠ
ಸರಳಾ, ಮುಗ್ಧ ಸ್ವಭಾವದ ಅಂತರ್ಮುಖಿ ಹುಡುಗಿ. ಶಾಲೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದ ಬುದ್ಧಿವಂತಿಕೆಯೊಂದಿಗೆ, ಮನೆಯಲ್ಲಿದ್ದಾಗಲೆಲ್ಲಾ ಅವಳು ಪುಸ್ತಕಗಳ ಜಗತ್ತಿನಲ್ಲಿ ಮುಳುಗಿ ಹೋಗುತ್ತಿದ್ದಳು. ಅವಳಿಗೆ ಬೇಸರವೂ ಇಲ್ಲ, ಕಷ್ಟವೂ ಇಲ್ಲ – ಹೀಗೆ ತನ್ನ ಶಾಂತ ಜೀವನದಲ್ಲಿಯೇ ತೃಪ್ತಿಯಿದ್ದಳು.
ಅವಳಿಗೆ ಯಾವ ಸಹಾಯ ಬೇಕಾದರೂ, ಸ್ವತಃ ಅದನ್ನು ಪಡೆದುಕೊಂಡುಬಿಡುತ್ತಿದ್ದಳು; ಓದು ಅಥವಾ ಬೇರೆ ಯಾವುದೇ ಅಗತ್ಯಗಳಾದರೂ. ಆದರೆ, ಇತರರಿಗೆ ಸಹಾಯ ಮಾಡಬೇಕೆಂದರೆ, ಸರಳಾ ಯಾವಾಗಲೂ ಸಿದ್ದವಾಗಿದ್ದಳು. ಜನರು ಅವಳ ಮುಗ್ಧತೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದರು.
ಅವಳ ತಾಳ್ಮೆ ಮತ್ತು ನಿಷ್ಕಪಟತೆಯ ಲಾಭ ಪಡೆಯುತ್ತಾ, ಜನರು ಅವಳನ್ನು ಬಳಸಿಕೊಳ್ಳುತ್ತಿರುವುದನ್ನು ಸರಳಾ ನಿಧಾನವಾಗಿ ಅರಿತುಕೊಳ್ಳುತ್ತಿದಂತೆ, ಅವಳ ಮನಸ್ಸಿನಲ್ಲಿ ಚೂರು ನೋವು ಉಂಟಾಯಿತು. "ನಾನು ಎಲ್ಲರಿಗೂ ಸಹಾಯ ಮಾಡುತ್ತಿದ್ದೇನೆ,ಆದರೆ ನನಗೆ ಅಗತ್ಯವಿದ್ದಾಗ ಯಾರೂ ಸಹಾಯ ಮಾಡುತ್ತಿಲ್ಲ.ಈ ವಿಚಾರವು ಅವಳ ಮನಸ್ಸಿನಲ್ಲಿ ಆಳವಾಗಿ ನಾಟಿಕೊಂಡಿತು.
ಅಂತಿಮವಾಗಿ, ಸರಳಾ ತನ್ನ ಸುತ್ತಲಿನ ಪ್ರಪಂಚದ ವಾಸ್ತವವನ್ನು ಅರ್ಥಮಾಡಿಕೊಂಡಳು. ಯಾವುದೇ ಪರಿಗಣನೆಯಿಲ್ಲದೆ ಜನರು ತಮ್ಮ ಲಾಭಕ್ಕಾಗಿ ಇತರರನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಅವಳು ಅರಿತುಕೊಂಡಳು.
ಇನ್ಮುಂದೆ, ಅವಳು ಸಹಾಯ ಮಾಡುವಾಗ ಮಿತಿಯ ಅರ್ಥವನ್ನು ತಿಳಿಯುತ್ತಿದ್ದಳು. ಅವಳು ಅಂತರ್ಮುಖಿಯಾಗಿದ್ದರೂ, ಅವಳೊಳಗಿನ ಬಲವು ಈಗ ಸ್ಪಷ್ಟವಾಗಿತ್ತು.
Comments