ಹೊಸ ಹಾದಿಯ ಕನಸು 1

 ಬಸ್‌ಗೆ ತಡವಾಗಿದರಿಂದ, ಅಪ್ಪ ಶಿವಪ್ಪ ಅಮ್ಮ ದೇವಕಿನ ಸೇರಿಸಿ ಬೈಯಲಾರಂಭಿಸಿದರು. ಮತ್ತೆ ಕೈ ಬೀಸಿಕೊಂಡು ಮುಂದೆ ನಡೆದರು.ರಾಣಿ ಹೆಗಲ ಮೇಲೆ ಕಾಲೇಜು ಬ್ಯಾಗ್‌ನ್ನು, ಕೈಯಲ್ಲಿ ಬಟ್ಟೆ ತುಂಬಿದ ಬ್ಯಾಗ್‌ನ್ನು ಹಿಡಿದು ಹಿಂದಿನಿಂದ ಓಡಿದಳು.ಮನೆಯಿಂದ ಬಸ್ ನಿಲ್ದಾಣಗೆ 15 ನಿಮಿಷದ ದಾರಿ.

ಬಸ್ ಶ್ರೀದೇವಿ ಪಾಯಂ ಎಂದು ಸೌಂಡ್ ಮಾಡಿದ ಶಬ್ದ ಕೇಳಿಸಿತು. ಅಪ್ಪನ ಸಿಟ್ಟು ಏನೋ ಜಾಸ್ತಿಯಾಯಿತು."ಇನ್ನು ಬಸ್ ಸಿಕ್ಕಾಗನೇ"ಎಂದು ಬೈಯಲಾರಂಭಿಸಿದರು.

ರಾಣಿ ಬ್ಯಾಗ್ಗಳ ಭಾರದಿಂದ ಸುಸ್ತಾಗಿ ಉಸು ಉಸು ಎಂದು ನಿಟ್ಟುಸಿರು ಬೀಡುತಿದ್ದಳು. ದಾರಿಯಲ್ಲಿ ಹಾಲು ಡೈರಿ ಹಾಕಲು ಹೋದ ರಾಮಯ್ಯ ಸಿಕ್ಕಿದರು, ಅವರು "ಬಸ್ ಇನ್ನೂ ಬಂದಿಲ್ಲ, ದೂರದಲ್ಲಿದೆ,ಬರುವಾಗಲೆ ಹಾರ್ನ್ ಹಾಕುತ್ತಾರೆ" ಎಂದು ಹೇಳಿದರು. ಶಿವಪ್ಪ ದಬ್ಬ ದಬ್ಬ ಹೆಜ್ಜೆ ಹಾಕಿ ಹೋದರು, ರಾಣಿ ಅವರ ಹಿಂದಿನಿಂದ ಓಡಿದಳು.

ಅರ್ಧ ದಾರಿ ಇರುವಾಗಲೇ ಬಸ್ ಬಂದು ಬಸ್ ಸ್ಟ್ಯಾಂಡ್‌ನಲ್ಲಿ ನಿಂತಿತು.ಇನ್ನೂ ಬಸ್ ಕೈ ತಪ್ಪಿತು,ಎಂದುಕೊಂಡು ಮತ್ತೆ ಅಪ್ಪನ ಬೈಗುಳ ನೆನೆಸಿ ನಡುಗಿದಳು.

ಆದರೆ ಬಸ್ ಡ್ರೈವರ್ ದೂರದಲ್ಲಿಯೇ ಆವರನ್ನ ಗಮನಿಸಿ ಸ್ವಲ್ಪ ಹೊತ್ತು ಕಾದೂ, ಹತ್ತಿಕೊಂಡರು.

ಮುಂದುವರೆಯುವುದು.....

Comments

Popular posts from this blog

ದೂರದ ಅಭಿಲಾಷೆಯಿಂದ, ಇರುವುದುನು ಮರೆತೇವಾ?

ಎಲ್ಲಿ ಜಾರಿತು ಮನ?

ಕೇಶವನ ಕನಸು ಸಾಕಾರ: ಕಮಲಾಳ ಹೋರಾಟದ ಕಥೆ