ನಾನು ನನ್ನಗೆ ತಕ್ಕ ಹೆಂಡತಿ
ನನ್ನ ಹೆಂಡತಿ ಪುಷ್ಪಾ ಪುಪ್ಪಳ ಸದಾ ಒಂದೇ ಮಾತು – ಅವರು ಎಷ್ಟು ಹೆಚ್ಚು ಸಂಪಾದಿಸುತ್ತಿದ್ದಾರೆ ಗೊತ್ತಾ?.ನಾನು ಯಾವಾಗಲೂ ನನ್ನ ಹೆತ್ತವರನ್ನು ದೂಷಿಸುತ್ತೇನೆ ಮತ್ತು ಎಲ್ಲ ಅಣ್ಣನಿಗೆ ಕೊಟ್ಟಿದ್ದರೆಂದು ಯೋಚಿಸುತ್ತಿದ್ದೆ.
ಇನ್ನು ನನ್ನ ಯೌವನದ ದಿನಗಳನ್ನು ಹಿಂತಿರುಗಿ ನೋಡಿದಾಗ,, ನನ್ನ ಮಗ ಈಗ ಏನು ಮಾಡುತ್ತಿದ್ದಾನೋ, ನಾನೂ ಅದೇ ಮಾಡುತ್ತಿದ್ದೆ – ಸ್ನೇಹಿತರ ಜೊತೆ ಪಾರ್ಟಿ, ಕ್ರಿಕೆಟ್ ಆಟವಾಡುವುದು, ಇಷ್ಟೆ ಚಿಂತೆ ಮಾಡದೇ, ಒಂದು ಕ್ಷಣಿಕ ಜೀವನ.
ನನ್ನ ಅಣ್ಣನಾದ ರಾಜು ಯಾವಾಗಲೂ ಭವಿಷ್ಯದ ಬಗ್ಗೆ ಯೋಜನೆ ಹಾಕಿಕೊಂಡಿದ್ದ. ‘ಐದು ವರ್ಷಗಳ ನಂತರ, ಹೀಗೆ ಹೀಗೆ ಮಾಡೋಣ’ ಎಂದಿದ್ದ. ನಮ್ಮ ತಂದೆಯಾದ ರಾಮಯ್ಯ ಜಮೀನು ಸಮವಾಗಿ ಹಂಚಿಕೊಂಡರು. ನಾನು ಒಂದು ಹಸು ತೆಗೆದುಕೊಂಡು ಅದರ ಹಾಲು ಮಾರುತ್ತಿದ್ದೆ, ಇಷ್ಟೆ ನನ್ನ ದಿನ ಕಳೆದಿತ್ತು. ನನ್ನ ಅಣ್ಣ ರಾಜು ಹತ್ತು ಹಸುಗಳನ್ನು ತೆಗೆದುಕೊಂಡು ಅದರ ಹಾಲು ಮಾರುತ್ತಿದ್ದ. ಅವನು ಯಾವಾಗಲೂ ದೊಡ್ಡದಾಗಿ ಯೋಚಿಸುತ್ತಿದ್ದ.ಅದಕ್ಕಾಗಿಯೇ ಕಷ್ಟಪಟ್ಟು ಕೆಲಸ ಮಾಡುತ್ತಿದ್ದ.
ನನ್ನ ಅತ್ತಿಗೆ ಗೌರಿ ಅವನನ್ನು ಬೆಂಬಲಿಸಿದ್ದಳು.ಆದರೆ ನನ್ನ ಹೆಂಡತಿ ಪುಷ್ಪಾ ಕೂಡ ನನ್ನಂತೆಯೇ. ಯಾವಾಗಲೂ ಯಾವ ದೊಡ್ಡ ನಿರ್ಣಯ ತಗೊಳ್ಳುವುದಕ್ಕೆ ಸಿದ್ಧ ಇಲ್ಲ. ‘ಅವರು ಎಷ್ಟು ಸಂಪಾದಿಸುತ್ತಿದ್ದಾರೆ’ ಎಂಬುದನ್ನು ಮಾತ್ರ ಹೇಳುತ್ತಾಳೆ.
ಆದರೆ ಏಕೆ ಅವರು ಹೆಚ್ಚು ಸಂಪಾದಿಸುತ್ತಿದ್ದಾರೆ ಎಂದು ನಾನೂ ಅವಳೂ ಯೋಚಿಸಲಿಲ್ಲ. ಈಗ ನನ್ನ ಮಗ ಸಂತೋಷ್ ಕೂಡ ಹಾಗೆಯೇ. ನನ್ನ ಅಣ್ಣನ ಮಕ್ಕಳು ರಾಣಿ ಮತ್ತು ರಂಜನ್ ಕೂಡ ಅವನನ್ನು ಬೆಂಬಲಿಸುತ್ತಿದ್ದಾರೆ. ನಾನು ಈಗ ಮಗನಿಗೆ ಏನಾದರೂ ಮಾಡು ಎಂದರೆ, ‘ನೀನು ಏನು ಮಾಡಿದ್ದೆ?’ ಎಂದು ಕೇಳುತ್ತಾನೆ. ನನ್ನ ಹೆಂಡತಿಯೂ ಅವನನ್ನು ಬೆಂಬಲಿಸುತ್ತಾಳೆ."
Comments