ಮರದಲ್ಲಿ ಶವ ನೇತಾಡುತ್ತಿದೆ

 ಹತ್ತು ವರ್ಷಗಳ ಹಿಂದೆ, ನಮ್ಮ ಎಲ್ಲಾ ಮಕ್ಕಳು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಹೋಗುತ್ತಿದ್ದರು. ಹೊಡೆಯುವುದು, ಓಡುವುದು, ಬಿದ್ದು ನಗುವುದು—ಹೀಗೆಯೇ ದಿನವಿಡೀ ಕಾಲ ಕಳೆಯುತ್ತಿದ್ದರು. ನಂತರ, ಕಾಲ ಬದಲಾಗಿತು! ಎಲ್ಲರೂ ಖಾಸಗಿ ಅಥವಾ ಇಂಗ್ಲಿಷ್ ಮಾಧ್ಯಮದ ಕಡೆಗೆ ಓಡಲಾರಂಭಿಸಿದರು. ಹಳೆಯ ಶಾಲೆಯಲ್ಲಿ 400-600 ಮಕ್ಕಳು ಇದ್ದರೂ, ಶೌಚಾಲಯ ಮಾತ್ರ ಒಂದೇ ಇದ್ದಿತು.ಆಗ, ಎಲ್ಲಾ ಮಕ್ಕಳು ಹತ್ತಿರದ ಮೈದಾನಕ್ಕೆ, ಅಂದರೆ ಕಾಡಿನೊಳಗೆ, ಶೌಚಕ್ಕೆ ಹೋಗುತ್ತಿದ್ದರು. ಒಂದು ದಿನ, ಯಾರೋ ಮರದಲ್ಲಿ ತೂಗುತ್ತಿರುವ ಶವವನ್ನು ನೋಡಿದರು. ಮಕ್ಕಳು "ಅಯ್ಯೋ ದೇವರೇ! ಏನಿದು?" ಎಂದು ಭಯದಿಂದ ಬೆಚ್ಚಿಬಿದ್ದರು. ಯಾರೂ ಹೊರಗೆ ಹೋಗಲು ತಯಾರಿರಲಿಲ್ಲ.

ಎರಡು ದಿನಗಳ ನಂತರ, ಈ ಸುದ್ದಿ ಶಿಕ್ಷಕರಿಗೆ ತಲುಪಿತು. "ಮರದಲ್ಲಿ ಶವ ನೇತಾಡುತ್ತಿದೆ" ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು.ಆದರೆ ನಮ್ಮ ಶಾಲಾ ಶಿಕ್ಷಕರು ಬುದ್ಧಿವಂತರು! ಪಂಚಾಯತ್ ಸದಸ್ಯರನ್ನು ಕರೆದು "ನೋಡ್ರಪ್ಪ, ಏನದು?" ಎಂದು ವಿಚಾರಿಸಿದರು.

ಪಂಚಾಯಿತಿ ಸದಸ್ಯರು ಬಂದು ಪರಿಶೀಲನೆ ಮಾಡಿದಾಗ, ಮಸ್ತು ಗಲಾಟೆ. "ಇದು ಶವವಲ್ಲಪ್ಪಾ, ಈ ತಾಳೆ ಎಲೆಗಳೋ ತೂಗುತ್ತಿದೆ!" ಎಂದರು.

ಎಲ್ಲ ಮಕ್ಕಳು, "ಏನಪ್ಪಾ, ತಾಳೆ ಎಲೆಗಳನ್ನೇ ನೋಡಿ ಬೆಚ್ಚಿಬಿದ್ದಿದ್ದೆವು!" ಎಂದು ನಕ್ಕಾಡಿದರು.

Comments

Popular posts from this blog

ದೂರದ ಅಭಿಲಾಷೆಯಿಂದ, ಇರುವುದುನು ಮರೆತೇವಾ?

ಎಲ್ಲಿ ಜಾರಿತು ಮನ?

ಕೇಶವನ ಕನಸು ಸಾಕಾರ: ಕಮಲಾಳ ಹೋರಾಟದ ಕಥೆ