ಹೊಸ ಹಾದಿಯ ಕನಸು 2
ರಾಣಿ ಮತ್ತು ಅವಳ ಅಪ್ಪ ಶಿವಪ್ಪ ಬಸ್ ಹತ್ತಿಕೊಂಡರು. ಬೆಳಗ್ಗೆ 7 ಗಂಟೆಯ ಬಸ್ ಆಗಿದ್ದರಿಂದ ಜನರು ಅಷ್ಟು ಇದ್ದಿರಲಿಲ್ಲ, ಮತ್ತು ಕಾಲೇಜು ಇನ್ನೂ ಆರಂಭವಾಗಿರಲಿಲ್ಲ. ರಾಣಿ ಖಾಲಿ ಇರುವ ಸೀಟಿನಲ್ಲಿ ಕುಳಿತಳು. ಆಕೆ ಕುಳಿತ ಸೀಟಿನಲ್ಲಿ ಯಾರು ಬರಲಿಲ್ಲವೆಂದು ತಾನು ತನ್ನ ಬ್ಯಾಗನ್ನು ಪಕ್ಕದಲ್ಲಿ ಇಟ್ಟುಕೊಂಡಳು. ಬಸ್‌ನಲ್ಲಿ "ಹರಿವಾಸನಂ" ಎಂಬ ಅಯ್ಯಪ್ಪನ ಹಾಡು ಜೋರಾಗಿ ಕೇಳಿಸುತ್ತಿತ್ತು.
ಬಸ್ ಸ್ಟ್ಯಾಂಡಿನಲ್ಲಿ ಬಸ್ ನಿಲ್ಲುತ್ತಿದ್ದಾಗ,ಬಸ್ ಮುಂದಿನ ಹಿಂದಿನ ಬಾಗಿಲಿನ ಕಡೆಗೆ ತಿರುಗಿ, ಯಾರಾದರೂ ನನ್ನ ಕಾಲೇಜಿಗೆ ಬರುವವರಿದಾರಾ ಎಂದು ನೋಡುತ್ತಿದ್ದಳು. ಆ ಹಾಡಿನ ಮಧ್ಯದಲ್ಲಿ, ಹಿಮದ ಹನಿಗಳ ನಡುವೆ ಬಸ್ ಸದ್ದು ಮಾಡುತ್ತಾ ಹೋಗುತ್ತಿತ್ತು.ಆ ನಡುವೆ ರಾಣಿ ನಿಧಾನವಾಗಿ ನಿದ್ದೆಗೆ ಜಾರಿದಳು.ಆದರೆ ಆಕೆಗೇ ಅದು ಗೊತ್ತಾಗಲಿಲ್ಲ. ಶಿವಪ್ಪ ಬಂದು ಎಬ್ಬಿಸಿದಾಗ, ರಾಣಿ ಬೆಚ್ಚಿ ಎದ್ದುಕೊಂಡಳು. ಅಷ್ಟರಲ್ಲೇ, ಬಸ್ ಆಕೆಗೆ ಇಳಿಯಬೇಕಾದ ಬಸ್ ಸ್ಟ್ಯಾಂಡಿಗೆ ಬಂದು ನಿಂತಿತ್ತು.
ಆ ಹೊತ್ತಿಗೆ ಬಸ್ ಜನರಿಂದ ತುಂಬಿತ್ತು. ಹೇಗೋ ಜನರ ನಡುವೆ ನುಸುಳಿ,ಬ್ಯಾಗ್ನ್ನು ಎಳೆದುಕೊಂಡು ರಾಣಿ ತನ್ನ ಅಪ್ಪನೊಂದಿಗೆ ಬಸ್‌ನಿಂದ ಇಳಿದಳು.
ಮುಂದುವರೆಯುವುದು.....
Older
https://smartstandlif.blogspot.com/2024/09/1.html
Comments