Posts

ಎಲ್ಲಿ ಜಾರಿತು ಮನ?

ರಾಮಣ್ಣನ ಕನಸು ರಾಮಣ್ಣ ಸರಳ ಮನಸ್ಸಿನ ರೈತ. ಒಂದು ಎಕರೆ ಜಮೀನು, ಬಡತನದಲ್ಲಿ ಬದುಕು, ಆದರೆ ಮನೆಯಲ್ಲಿ ನೆಮ್ಮದಿ. ಹೆಂಡತಿ ಗೋಪಿ , ಮನೆಯ ಕೆಲಸಗಳಲ್ಲಿ ತೊಡಗಿರುವ ಶ್ರದ್ಧಾಳು ಗೃಹಿಣಿ. ಮೊದಲ ಇಬ್ಬರು ಮಕ್ಕಳು: ಪ್ರವೀಣ್ ಮತ್ತು ಪ್ರಮೋದ್ . ಮನೆಯವರ ಆಕಾಂಕ್ಷೆ ಏನೆಂದರೆ, ಒಂದು ಹೆಣ್ಣುಮಗು ಬೇಕೆಂಬುದು. ದೇವರು ಆಶೀರ್ವದಿಸಿದಂತೆ ಹೆಣ್ಣುಮಗು ಹುಟ್ಟಿತು — ಪದ್ಮಿನಿ. "ದೇವ್ರು ನನಗೆ ದೇವಿಯೇ ಕೊಟ್ಟಿದ್ದಾರೆ!" ಎಂದು ಊರಲ್ಲೆಲ್ಲಾ ಘೋಷಿಸಿದ ರಾಮಣ್ಣ. ಮಕ್ಕಳ ಬೆಳವಣಿಗೆ ಪ್ರವೀಣ್ ಮತ್ತು ಪ್ರಮೋದ್ ಹತ್ತನೇ ತರಗತಿಯಲ್ಲಿ ನಿಲ್ಲಿಸಿ, ಜೀವನದ ಹೊರೆ ತಾಳಬೇಕೆಂದು ಬಾಂಬೆಗೆ ಹೋದರು. ಕಾರ್ಖಾನೆಯಲ್ಲಿ ದುಡಿದು, ತಾವು ಕಲಿಯದೇ ಬಿಟ್ಟ ಬದುಕನ್ನು ಸಹೋದರಿಯ ಕನಸುಗಳಾಗಿ ರೂಪಿಸುವ ಕನಸು ನೋಡಿದವರು ಅವರು. ಪದ್ಮಿನಿಗೆ ಓದಿನಲ್ಲಿ ಆಸಕ್ತಿ ಇರಲಿಲ್ಲ. ಎಂಟನೇ ತರಗತಿ ಪಾಸಾದರೂ, ಒಂಭತ್ತರಲ್ಲಿ ನಿಲ್ಲಿಬಿಟ್ಟಳು. ಆದರೆ ಅವಳು ಕನಸು ಕಾಣತೊಡಗಿದಳು. ಪದ್ಮಿನಿಯ ಕನಸು "ನಾನೂ ಒಂದು ದಿನ ಶ್ರೀಮಂತನಿಗೆ ಮದುವೆಯಾಗ್ತೀನಿ. ಕಾರು, ಬಂಗ್ಲಾ, ಎಲ್ಲವೂ ನನ್ನದೇ ಆಗಬೇಕು!" – ಈ ಕನಸುಗಳು ಅವಳ ದೈನಂದಿನ ಜೀವಾಳವಾಗಿದವು. ಪ್ರವೀಣ್ ಮತ್ತು ಪ್ರಮೋದ್ ತುಂಬಾ ಪ್ರೋತ್ಸಾಹಿಸಿದರು: "ಪರೀಕ್ಷೆ ಪಾಸ್ ಆಗು ಪದ್ಮಿನಿ, ನಿನ್ನ ಜೀವನ ನಿನ್ನ ಕೈಯಲ್ಲಿ ಇಟ್ಟುಕೊಳ್ಳು" ಎಂದು. ಪದ್ಮಿನಿ… ಅವಳ ಆಸಕ್ತಿ ಪುಸ್ತಕಗಳಲ್ಲಿ ಇರಲಿಲ್ಲ. ಎಂಟನ...

Tulunadu Style Cucumber-Toor Dal Sambar

Cucumber Toor Dal Sambar Recipe Ingredients: 6 dried red chillies (adjust for spiciness) 1 teaspoon coriander seeds 1/2 teaspoon mustard seeds 1/2 teaspoon cumin seeds Small piece of tamarind 1 small onion 2-3 garlic cloves 1 cup toor dal (pigeon peas) 1-2 cups chopped cucumber Salt to taste Water as needed Oil for cooking Steps: 1. Soak tamarind in warm water for 10 minutes. 2. Grind red chillies, coriander seeds, mustard seeds, cumin seeds, tamarind, onion, and garlic into a smooth paste. 3. Cook the toor dal until soft. 4. Add chopped cucumber to the cooked dal and cook until tender. 5. Add the ground spice paste (masala) to the dal and cucumber mixture. 6. Add salt and simmer for 5-10 minutes until all flavors combine. 7. Serve hot with rice or as you like. Uses 1. Main dish with rice: Serve it hot with steamed rice for a wholesome meal. 2. Side dish: Goes well as a side with dosa, idli, or chapati. 3. Healthy option: Light and nutritious, good for digestion and hydration because o...

ದೂರದ ಅಭಿಲಾಷೆಯಿಂದ, ಇರುವುದುನು ಮರೆತೇವಾ?

Image
 ಎಷ್ಟು ವಿಚಿತ್ರ ಅಲ್ವಾ! ನಾವು ದಿನಚರಿಯಲ್ಲೇ ವಿಶ್ರಾಂತಿಗಾಗಿ ಮಾಲ್ಡೀವ್ಸ್, ಮಲ್ಲಿಗೆಂದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೋಗುತ್ತಿದ್ದೇವೆ. ಆದರೆ ಒಂದು ಅಡಿ ದೂರದಲ್ಲಿರುವ ನಮ್ಮ ಮನೆಯ ಅಂಗಳದಲ್ಲೇ ಇರುವ ಪ್ರಕೃತಿಯ ಸೌಂದರ್ಯವನ್ನಾದರೂ ನೋಡಿದ್ದೇವಾ? ಬಾಲ್ಯದಲ್ಲಿ ಓಡಿದ ಜಾಗವನ್ನೆಲ್ಲ ಮರೆತುಬಿಟ್ಟಿದ್ದೇವೆ. ಆಗ ನಡೆದ ದಾರಿಯನ್ನು ಮರೆತುಹೋಗಿದ್ದೇವೆ. ವಾಹನಗಳಲ್ಲಿ ಓಡುತ್ತಾ ನಾವು ನಡೆವುದನ್ನೇ ಮರೆತುಬಿಟ್ಟಿದ್ದೇವೆ. ಕಾಲಿನಲ್ಲಿ ಮಣ್ಣಿನ ಸ್ಪರ್ಶವೇ ಇಲ್ಲದಂತಹ ಜೀವನ ಶೈಲಿಯಾಗಿದೆ. ಅಯ್ಯೋ! ಪ್ರಕೃತಿ ಹಗಲು ರಾತ್ರಿ ಕರೆಯುತ್ತಲೇ ಇರುತ್ತದೆ. ಅದರ ಮಡಿಲಲ್ಲಿ ನಾವು ಕಂಡ ಸುಖ, ನೆಮ್ಮದಿ ಎಲ್ಲವೂ ಈಗ ಕಣ್ಣಿನ ಸ್ಪರ್ಶ ರೇಖೆಯ ಹಿಂದೆ ಸೆರೆಯಾಗಿವೆ. ಹಳೆಯ ನೆನಪುಗಳು ಒಂದಷ್ಟು ಹೂವಿನ ಪರಿಮಳದಂತೆ ಮರಳುತ್ತವೆ – ಬಾಲ್ಯದ ಆ ಉತ್ಸಾಹ, ಓಡಾಟ, ಮಣ್ಣಿನ ಸುಗಂಧ, ಹಾಡುವ ಹಕ್ಕಿಗಳ ಕೂಗು... ಇವು ಎಲ್ಲವೂ ನಮ್ಮನ್ನು ಮತ್ತೆ ನಿಸರ್ಗದತ್ತ ಕರೆದು ಕೊಳ್ಳುತ್ತವೆ. ಆದರೆ ನಾವು ಕೇಳಲು ಇಚ್ಛಿಸುತ್ತೇವಾ? ಸಮಯ ನೀಡುತ್ತೇವಾ?

What You’re Doing—Sometimes Do It Differently, You’ll Have a New Experience

Image
 A Walk in the Opposite Direction Today’s walk turned out to be unexpectedly amusing. While everyone in the park was walking from right to left, I unknowingly walked from left to right. I noticed a few surprised glances—some people even slowed down and stared. It felt like I was flowing against the current, and that gave me a strangely different experience. After the walk, I spent another half an hour doing some light exercises before heading home. Sometimes, doing something a little different brings a fresh perspective to even the simplest routines.

ಹೊಸ ಹಾದಿಯ ಕನಸು 6

 ಇನ್ನೊಂದು ರೋಮಾಂಚಕ ಸಂಚಿಕೆಗೆ ಸ್ವಾಗತ! ನೀವು ಹಿಂದಿನ ಸಂಚಿಕೆಯನ್ನು ತಪ್ಪಿಸಿಕೊಂಡಿದ್ದರೆ, ಹಿಂದಿನ ಸಂಚಿಕೆಗೆ ಇಲ್ಲಿ ಕ್ಲಿಕ್ ಮಾಡಿ ಮತ್ತು ಅದನ್ನು ಓದಿ. ಮುಂದೆ  ಮತ್ತಷ್ಟು ಕುತೂಹಲಕರ ಸಂಗತಿಗಳನ್ನು ನೋಡೋಣ! ರಾಣಿ ಮತ್ತು ಅಪ್ಪ ಶಿವಪ್ಪ. ಅಲ್ಲಿ ಪಕ್ಕದಲ್ಲಿದ್ದ ಎಳ್ಳು ನೀರು ಕುಡಿದು, ಮತ್ತೆ ನಗರದಿಂದ ಕಾಲೇಜಿಗೆ ಹೋಗುವ ಬಸ್ಸಿಗೆ ಹತ್ತಿದರು. ಅಪ್ಪ ಬಸ್ ಕಂಡಕ್ಟರ್‌ನ್ನು ನೋಡಿ,"ಕಾಲೇಜ್ ಹೆಸರನ್ನ ಹೇಳಿ ಹೋಗ್ತೀರ?" ಎಂದು ಕೇಳಿದಾಗ, "ಹೌದು" ಎಂದು ಉತ್ತರಿಸಿದ. ಕಂಡಕ್ಟರ್ ಊರ ಹೆಸರನ್ನು ಹೇಳುತ್ತಾ ಜೋರಾಗಿ ಕೂಗುತ್ತಿದ್ದ. ರಾಣಿಗೆ ಆ ಹೆಸರು ಹೊಸದಾಗಿತ್ತು. ಆ ಕ್ಷಣಕ್ಕೆ ನೆನಪಿಟ್ಟುಕೊಳ್ಳುವುದು ಕಷ್ಟವಾಗುತ್ತಿತ್ತು. ಅಪ್ಪ ಬಸ್ ನಂಬರ್‌ನ್ನು ಹೇಳಿ, "ಈ ನಂಬರ್‌ನ್ನು ನೆನಪಿಟ್ಟುಕೋ" ಎಂದರು. ಜನರು ಒಬ್ಬರ ಮೇಲೆ ಒಬ್ಬರು ಬಸ್ಸಿಗೆ ಹತ್ತಲು ಪ್ರಾರಂಭಿಸಿದರು. ಬಸ್ ಕಾಲೇಜಿನ ಕಡೆ ಹೊರಟಿತು. ಕಿಟಕಿಗಳಿಲ್ಲದ ಬಸ್‌ನೊಳಗೆ ತಂಪಾದ ಗಾಳಿ ಬೀಸುತ್ತಿತ್ತು. ಎರಡೂ ಬಸ್ಸು ಹತ್ತಿ ಇಳಿದು ಆಯಾಸಗೊಂಡ ರಾಣಿಗೆ "ಆಹಾ!" ಅನ್ನಿಸಿತು. ಸೂರ್ಯ ನಿಧಾನವಾಗಿ ಮೇಲೇರುತ್ತಿದ್ದಂತೆ,ಪ್ರಕಾಶಮಾನವಾದ ಕಿರಣಗಳು ಮುಖಕ್ಕೆ ಬೀಳುತ್ತವೆ. ಆಕಾಶದ ಕಡೆ ಚುಂಬಿಸುತ್ತಿದ್ದ ಆ ದೊಡ್ಡ ಕಟ್ಟಡಗಳು, ಮಕ್ಕಳ ಫ್ಯಾಷನ್‌ಬದ್ಧ ತೊಡಿಗೆ, ಸ್ಟೈಲಿಷ್ಟ್ ಇಂಗ್ಲಿಷ್ ಮಾತು—all seemed like calling her to a new world...

ಹೊಸ ಹಾದಿಯ ಕನಸು 5

 ರಾಣಿಯ ಕನಸುಗಳು, ಆಕೆಯ ಹೊಸ ಹಾದಿಗೆ ಒಂದು ಹೊಸ ದಾರಿ ತೋರಿಸುತ್ತಿದ್ದವು. ಬಸ್‌ ಸಾಗುತ್ತಿದ್ದಂತೆ, ಅವಳ ಯೋಚನೆಗಳು ಇನ್ನಷ್ಟು ಗಾಢವಾಗುತ್ತಿದ್ದವು. ಹೊಸ ಪರಿಸರ, ಹೊಸ ಜೀವನ, ಹೊಸ ಗುರಿಗಳು—ಎಲ್ಲವನ್ನೂ ತಲುಪುವ ಹಂಬಲದಲ್ಲಿ, ರಾಣಿ ತನ್ನ ಎದೆಗೆ ಧೈರ್ಯ ತುಂಬಿಕೊಳ್ಳುತ್ತಾಳೆ. 'ನಾವು ಇಲ್ಲಿ ಬಂದಿರುವುದು ಒಂದು ಹೊಸ ಆರಂಭದ ಗುರುತು' ಎಂದುಕೊಂಡಳು. ಹಠಾತ್ ರಾಣಿಗೆ ಹೊಟ್ಟೆ ತೊಳಲಾಯಿತು, ಒವ್ವೇಲೆ ವಾಂತಿ ಬರುವಂತಾಯಿತು.ಆಗ ಬಸ್ ನಿಧಾನವಾಗಿ ಬ್ರೇಕ್ ಹಾಕಿ, ಕೊನೆಯ ಬಸ್ ಸ್ಟಾಪ್‌ನಲ್ಲಿ ನಿಂತಿತು. ಅಪ್ಪ ಶಿವಪ್ಪ, 'ಏನಾಯ್ತು?' ಎಂದು ಕೇಳಿದಾಗ, ರಾಣಿ ಸ್ವಲ್ಪ ಹೊತ್ತು ಹಾಗೆ ಕುಳಿತುಕೊಂಡು ಸಹಿಸಿಕೊಳ್ಳುತ್ತಾಳೆ. ಎಲ್ಲರೂ ಬಸ್ಸಿನಿಂದ ಇಳಿದ ನಂತರ, ನಿಧಾನವಾಗಿ ಇಳಿದು, ಅಪ್ಪನ ಹಿಂದೆ ನಡೆಯತೊಡಗಿದಳು.ಅವರು ಮೀನು ಮಾರುಕಟ್ಟೆಯ ಮಧ್ಯೆ ಸಣ್ಣ ಹಾದಿಯಲ್ಲಿ ಹೋಗುತ್ತಿರುವಾಗ, ಅಲ್ಲಿನ ವಾಸನೆಗೆ ರಾಣಿಗೆ ಮತ್ತೊಮ್ಮೆ ಹೊಟ್ಟೆ ತೊಳಲಾಯಿತು. ಅದಕ್ಕಾಗಿ ಟವೆಲ್ ಮೂಗು ಬಾಯಿಗೆ ಭದ್ರವಾಗಿ ಮುಚ್ಚಿಕೊಂಡಳು.ಅದನ್ನು ಕಂಡು ಮೀನು ಮಾರುವ ಹೆಂಗಸೊಬ್ಬಳು ಮುಖ-ಬಾಯಿ ಮುಚ್ಚಿಕೊಂಡು ಈ ದಾರಿಯಲ್ಲಿ ಯಾಕೆ ಬರಬೇಕಾಗಿತ್ತು' ಎಂದಳು. ರಾಣಿಗೆ, 'ಅಬ್ಬಾ! ಎಷ್ಟು ದೂರ ನಡೆಯಬೇಕೆಂದು?' ಅನ್ನಿಸಿತು. ಕೊನೆಗೆ ಆ ಹಾದಿಯನ್ನು ದಾಟಿ, ಹೊರಗಿನ ರಸ್ತೆಗೆ ಬಂದು ನಿಂತರು. ರಸ್ತೆಯ ಸಂದು ದಾಟಿ, ಗಬ್ಬನೆ ಹೊಟ್ಟೆ ಹಿಡಿದು ವಾಂತಿ ಮಾಡಲಾರಂ...

ಹೊಸ ಹಾದಿಯ ಕನಸು 4

 ಬಸ್ಸು ಪಿಸುಗುಟ್ಟುತ್ತಾ ಹೆಜ್ಜೆ ಹೆಜ್ಜೆಯಾಗಿ ಸಾಗುತ್ತಿತ್ತು. ಜನಸಂದಣಿ, ಬಿಸಿನಗರದ ಗಾಳಿಯಲ್ಲಿ ರಾಣಿ ಆಲೋಚನೆಯ ಜಾಲದಲ್ಲಿ ಮುಳುಗುತ್ತಾಳೆ. "ಈ ಪ್ರಯಾಣ ಕೇವಲ ಬಸ್‌ನಲ್ಲಿಯೇ ಅಂತ್ಯಗೊಳ್ಳುವುದಿಲ್ಲ," ಅವಳ ಅಂತರಾಳದ ಆಲೋಚನೆಗಳು ಬಲಹೀನವಾಗಿದ್ದರೂ ಆಕೆಗೆ ಆಸಕ್ತಿ ಮೂಡಿಸುತ್ತವೆ. ಅಷ್ಟು ದಿನ ಹಳೆಯ ಪರಿಸರಕ್ಕೆ ಒಗ್ಗಿದ್ದ ರಾಣಿ, ಕಣ್ಣೆದುರಿನಲ್ಲಿಯೇ ಹಾದುಹೋಗುವ ದೊಡ್ಡ ದೊಡ್ಡ ಕಟ್ಟಡಗಳು, ಅಂಗಡಿಗಳು, ಬಟ್ಟೆಗಳ ಅಂಗಡಿಗಳಲ್ಲಿ ಬಣ್ಣ ಬಣ್ಣದ ಬಟ್ಟೆಗಳು, ಜನರ ವೈವಿಧ್ಯಮಯ ವೇಷಭೂಷಣಗಳನ್ನು ನೋಡಿದಾಗ ತಾನು ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುತ್ತಿದ್ದೇನೆ ಎಂದುಕೊಂಡಳು. ರಾಣಿ ತನ್ನ ವಯಸ್ಸಿಗೆ ತಕ್ಕ ನೂರು ಕನಸುಗಳನ್ನು ಹೊತ್ತಿದ್ದಳು. ತನ್ನ ಯೋಚನಾ ಜಾಲದಲ್ಲಿ ಮುಳುಗಿದ್ದ ರಾಣಿಗೆ ಹಠಾತ್, ಬಸ್ಸು ಒಂದು ದೊಡ್ಡ ಗುಂಡಿಗೆ ಬಿದ್ದಂತೆ ತಿರುಗಿ ಹೋಗಿತು. ರಾಣಿ ತನ್ನ ಬ್ಯಾಗ್ ಬಿಗಿಯಾಗಿ ಹಿಡಿದುಕೊಂಡು, ಜಾಗರೂಕರಾಗಿ ಬಸ್‌ನಲ್ಲಿ ನಿಂತಿದ್ದಳು. ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ತಾನು ಮುಂದು, ತಾನು ಮುಂದು ಎಂದು ಪೈಪೋಟಿಗೆ ನಿಂತು ಮುಂದೆ ಸಾಗುತಿದ್ದವು.2-3 ಸ್ಟಾಪ್‌ಗಳ ನಂತರ, ರಾಣಿಗೆ ಕುಳಿತುಕೊಳ್ಳಲು ಸೀಟ್ ಸಿಕ್ಕಿತು. ಅವಳ ಅಪ್ಪ ಶಿವಪ್ಪ ಹಿಂಬದಿ ಹೋಗಿ ಕುಳಿತುಕೊಂಡರು. ಬಸ್‌ ಮಾತ್ರ ಜನರನ್ನು ಹತ್ತಿಸುತ್ತಾ ಇಳಿಸುತ್ತಾ ಸಾಗುತ್ತಿತ್ತು."ಕಂಡಕ್ಟರ್, 'ಎಲ್ಲಿ ಹಿಂದಿನ ಬಸ್ ಮುಂದೆ ಹೋಗುತು' ಎಂದು ಜೋರಾಗಿ ಅವ...

ಹೊಸ ಹಾದಿಯ ಕನಸು 3

 ಬಸ್‌ನಿಂದ ಇಳಿದ ರಾಣಿ ಮತ್ತು ಅವಳ ಅಪ್ಪ ಶಿವಪ್ಪ ಇನ್ನೊಂದು ಬಸ್‌ಗಾಗಿ ಕಾಯುತ್ತಾ ನಿಂತಿದ್ದರು. ಬಸ್‌ಸ್ಟ್ಯಾಂಡ್‌ನಲ್ಲಿ ಎಲ್ಲೆಡೆ ಕಸ, ಪ್ಲಾಸ್ಟಿಕ್ ಬಾಟಲ್‌ಗಳು ಬಿದ್ದಿದ್ದವು. ಆ ಸುತ್ತಲಿನ ಅಸ್ಥಿರ ಪರಿಸರವನ್ನು ನೋಡಿ, ರಾಣಿ ಹೌಹಾರಿಸುತ್ತಿದ್ದು, "ಎಲ್ಲಿ ನಿಂತಿದ್ದೇವೆ?" ಎಂದು ತಲೆಯಲ್ಲೇ ಅಸಹ್ಯದಿಂದ ಮನದಟ್ಟು ಮಾಡಿಕೊಂಡಳು. ಸ್ವಲ್ಪ ಹೊತ್ತಿನ ನಂತರ ಬಸ್ಸೊಂದು ಜನಸಂದಣಿಯನ್ನು ಭೇದಿಸಿಕೊಂಡು   ಬಂದು ನಿಂತಿತು. ಬಸ್‌ ಜನರಿಂದ ತುಂಬಿ ತುಳುಕುತ್ತಿತ್ತು. "ಇದಕ್ಕೆಲ್ಲ ನಾವು ತಾಳುಬೇಕಾ?" ಎಂದು ರಾಣಿ ತಾನು ಮಾಡುವ ಪ್ರತಿ ಹೆಜ್ಜೆಗೂ ಸುಸ್ತಾಗಿ ಹೋಗುತ್ತಾ, ಆಕೆಯ ಕೈಯಲ್ಲಿದ್ದ ಬ್ಯಾಗನ್ನು ಬಿಗಿಯಾಗಿ ಹಿಡಿದುಕೊಂಡು, ಅಪ್ಪನ ಕೈ ಹಿಡಿದುಕೊಂಡಳು. ಹೇಗೋ ಜನರನ್ನು ಪಕ್ಕಕ್ಕೆ ತಳ್ಳಿ, ರಾಣಿ ಮತ್ತು ಶಿವಪ್ಪ ಬಸ್‌ ಒಳಗೆ ನುಸುಳಿದರು. ಆಮೇಲೆ, ರಾಣಿ ಅಪ್ಪನ ಕಡೆ ನೋಡಿದರೂ, ಅವನ ಮುಖದಲ್ಲಿ ಒಂದು ವಿಚಿತ್ರ ಶಾಂತಿ. " ಇಲ್ಲಿ ಏನಾಗುತ್ತಿದೆ ಎಂದು ಅವನಿಗೆ ಅನಿಸುವುದಿಲ್ಲವೇ?"  ಎಂದು ರಾಣಿ ಆಲೋಚಿಸುತ್ತಿರುವಷ್ಟರಲ್ಲಿ, ಬಸ್‌ನ ಒಳಗೆ ಒಂದು ಬಿಸಿನಗರದ ಝಳಕು ಎಸೆಯಿತು. ಆಕೆಗೆ ಆ ಮನೆಯಲ್ಲಿ ಇರುವಾಗಿಸಿದ ಆ ಗಾಢ ತಪಸ್ಸು ನೆನಪಾದಂತಿತ್ತು.ಅದು ಕೇವಲ ಪ್ರಯಾಣವಲ್ಲ, ಈ ಬದುಕಿನ ಒಂದು ಸಂಕೇತವಾಗಿತ್ತು. "ನನಗೆ ಮುಂದೆ ಏನೋ ದೊಡ್ಡದು ಕಾದಿರುವಂತೆ ಅನ್ನಿಸುತ್ತಿದೆ..." ಈ ಯೋಚನೆಗಳ ನಡುವೆ ಆಕೆಗ...

ಹೊಸ ಹಾದಿಯ ಕನಸು 2

 ರಾಣಿ ಮತ್ತು ಅವಳ ಅಪ್ಪ ಶಿವಪ್ಪ ಬಸ್ ಹತ್ತಿಕೊಂಡರು. ಬೆಳಗ್ಗೆ 7 ಗಂಟೆಯ ಬಸ್ ಆಗಿದ್ದರಿಂದ ಜನರು ಅಷ್ಟು ಇದ್ದಿರಲಿಲ್ಲ, ಮತ್ತು ಕಾಲೇಜು ಇನ್ನೂ ಆರಂಭವಾಗಿರಲಿಲ್ಲ. ರಾಣಿ ಖಾಲಿ ಇರುವ ಸೀಟಿನಲ್ಲಿ ಕುಳಿತಳು. ಆಕೆ ಕುಳಿತ ಸೀಟಿನಲ್ಲಿ ಯಾರು ಬರಲಿಲ್ಲವೆಂದು ತಾನು ತನ್ನ ಬ್ಯಾಗನ್ನು ಪಕ್ಕದಲ್ಲಿ ಇಟ್ಟುಕೊಂಡಳು. ಬಸ್‌ನಲ್ಲಿ "ಹರಿವಾಸನಂ" ಎಂಬ ಅಯ್ಯಪ್ಪನ ಹಾಡು ಜೋರಾಗಿ ಕೇಳಿಸುತ್ತಿತ್ತು.  ಬಸ್ ಸ್ಟ್ಯಾಂಡಿನಲ್ಲಿ ಬಸ್ ನಿಲ್ಲುತ್ತಿದ್ದಾಗ,ಬಸ್ ಮುಂದಿನ ಹಿಂದಿನ ಬಾಗಿಲಿನ ಕಡೆಗೆ ತಿರುಗಿ, ಯಾರಾದರೂ ನನ್ನ ಕಾಲೇಜಿಗೆ ಬರುವವರಿದಾರಾ ಎಂದು ನೋಡುತ್ತಿದ್ದಳು. ಆ ಹಾಡಿನ ಮಧ್ಯದಲ್ಲಿ, ಹಿಮದ ಹನಿಗಳ ನಡುವೆ ಬಸ್ ಸದ್ದು ಮಾಡುತ್ತಾ ಹೋಗುತ್ತಿತ್ತು.ಆ ನಡುವೆ ರಾಣಿ ನಿಧಾನವಾಗಿ ನಿದ್ದೆಗೆ ಜಾರಿದಳು.ಆದರೆ ಆಕೆಗೇ ಅದು ಗೊತ್ತಾಗಲಿಲ್ಲ. ಶಿವಪ್ಪ ಬಂದು ಎಬ್ಬಿಸಿದಾಗ, ರಾಣಿ ಬೆಚ್ಚಿ ಎದ್ದುಕೊಂಡಳು. ಅಷ್ಟರಲ್ಲೇ, ಬಸ್ ಆಕೆಗೆ ಇಳಿಯಬೇಕಾದ ಬಸ್ ಸ್ಟ್ಯಾಂಡಿಗೆ ಬಂದು ನಿಂತಿತ್ತು.  ಆ ಹೊತ್ತಿಗೆ ಬಸ್ ಜನರಿಂದ ತುಂಬಿತ್ತು. ಹೇಗೋ ಜನರ ನಡುವೆ ನುಸುಳಿ,ಬ್ಯಾಗ್ನ್ನು ಎಳೆದುಕೊಂಡು ರಾಣಿ ತನ್ನ ಅಪ್ಪನೊಂದಿಗೆ ಬಸ್‌ನಿಂದ ಇಳಿದಳು. ಮುಂದುವರೆಯುವುದು..... Older  https://smartstandlif.blogspot.com/2024/09/1.html

ಹೊಸ ಹಾದಿಯ ಕನಸು 1

 ಬಸ್‌ಗೆ ತಡವಾಗಿದರಿಂದ, ಅಪ್ಪ ಶಿವಪ್ಪ ಅಮ್ಮ ದೇವಕಿನ ಸೇರಿಸಿ ಬೈಯಲಾರಂಭಿಸಿದರು. ಮತ್ತೆ ಕೈ ಬೀಸಿಕೊಂಡು ಮುಂದೆ ನಡೆದರು.ರಾಣಿ ಹೆಗಲ ಮೇಲೆ ಕಾಲೇಜು ಬ್ಯಾಗ್‌ನ್ನು, ಕೈಯಲ್ಲಿ ಬಟ್ಟೆ ತುಂಬಿದ ಬ್ಯಾಗ್‌ನ್ನು ಹಿಡಿದು ಹಿಂದಿನಿಂದ ಓಡಿದಳು.ಮನೆಯಿಂದ ಬಸ್ ನಿಲ್ದಾಣಗೆ 15 ನಿಮಿಷದ ದಾರಿ. ಬಸ್ ಶ್ರೀದೇವಿ ಪಾಯಂ ಎಂದು ಸೌಂಡ್ ಮಾಡಿದ ಶಬ್ದ ಕೇಳಿಸಿತು. ಅಪ್ಪನ ಸಿಟ್ಟು ಏನೋ ಜಾಸ್ತಿಯಾಯಿತು."ಇನ್ನು ಬಸ್ ಸಿಕ್ಕಾಗನೇ"ಎಂದು ಬೈಯಲಾರಂಭಿಸಿದರು. ರಾಣಿ ಬ್ಯಾಗ್ಗಳ ಭಾರದಿಂದ ಸುಸ್ತಾಗಿ ಉಸು ಉಸು ಎಂದು ನಿಟ್ಟುಸಿರು ಬೀಡುತಿದ್ದಳು. ದಾರಿಯಲ್ಲಿ ಹಾಲು ಡೈರಿ ಹಾಕಲು ಹೋದ ರಾಮಯ್ಯ ಸಿಕ್ಕಿದರು, ಅವರು "ಬಸ್ ಇನ್ನೂ ಬಂದಿಲ್ಲ, ದೂರದಲ್ಲಿದೆ,ಬರುವಾಗಲೆ ಹಾರ್ನ್ ಹಾಕುತ್ತಾರೆ" ಎಂದು ಹೇಳಿದರು. ಶಿವಪ್ಪ ದಬ್ಬ ದಬ್ಬ ಹೆಜ್ಜೆ ಹಾಕಿ ಹೋದರು, ರಾಣಿ ಅವರ ಹಿಂದಿನಿಂದ ಓಡಿದಳು. ಅರ್ಧ ದಾರಿ ಇರುವಾಗಲೇ ಬಸ್ ಬಂದು ಬಸ್ ಸ್ಟ್ಯಾಂಡ್‌ನಲ್ಲಿ ನಿಂತಿತು.ಇನ್ನೂ ಬಸ್ ಕೈ ತಪ್ಪಿತು,ಎಂದುಕೊಂಡು ಮತ್ತೆ ಅಪ್ಪನ ಬೈಗುಳ ನೆನೆಸಿ ನಡುಗಿದಳು. ಆದರೆ ಬಸ್ ಡ್ರೈವರ್ ದೂರದಲ್ಲಿಯೇ ಆವರನ್ನ ಗಮನಿಸಿ ಸ್ವಲ್ಪ ಹೊತ್ತು ಕಾದೂ, ಹತ್ತಿಕೊಂಡರು. ಮುಂದುವರೆಯುವುದು.....

ಹೊಸ ಹಾದಿಯ ಕನಸು

ರಾಣಿ ಆಗಷ್ಟೇ 10ನೇ ತರಗತಿ ಮುಗಿಸಿ ಕಾಲೇಜಿಗೆ ಸೇರಿದು. ಕಾಲೇಜು ಮನೆಯಿಂದ ಸ್ವಲ್ಪ ದೂರವಾಗಿರುವುದರಿಂದ ಹಾಸ್ಟೆಲ್‌ನಲ್ಲಿ ಇರಬೇಕಾಯಿತು. ಸೈನ್ಸ್ ಆಯ್ಕೆ ಮಾಡಿ ಎಂಜಿನಿಯರಿಂಗ್ ಮಾಡುವ ಕನಸು. ನಾಳೆಯಿಂದ ಕಾಲೇಜು ಪ್ರಾರಂಭವಾಗುತ್ತದೆ. ಆ ರಾತ್ರಿ, ರಾಣಿಗೆ ನಿದ್ರೆ ಬರಲಿಲ್ಲ. ಹೊಸ ಕಾಲೇಜು ಹೇಗಿರುತ್ತೆ, ಸ್ನೇಹಿತರು ಹೇಗಿರುತ್ತಾರೆ? ನಾನು ಸೈನ್ಸ್ ಓದಬಹುದೇ? ಇಷ್ಟು ದಿನ ಕನ್ನಡದಲ್ಲಿ ಓದಿದ ರಾಣಿಗೆ, ಮುಂದೆ ಎಲ್ಲಾ ವಿಷಯಗಳು ಇಂಗ್ಲಿಷ್‌ನಲ್ಲಿ ಇರುವುದರಿಂದ ಅರ್ಥವಾಗುತ್ತಾ ಎಂಬ ಭಯ.   ಅಮ್ಮನಿಗೆ ಸಂಬಂಧಿಕರು - "ಅಷ್ಟು ಹೆಣ್ಣುಮಕ್ಕಳನ್ನು ಯಾಕೆ ಓದಿಸುತ್ತೀರಾ, ಗಂಡು ಸಿಗೋದು ಕಷ್ಟ," ಎಂದವರು. ಅಮ್ಮನಿಗೆ ಭಯ ಮತ್ತು ಆಶಾಭಾವನೆಗಳ ಮಿಶ್ರ ಭಾವನೆಗಳಾಗಿದ್ದವು. ಅಪ್ಪನಿಗೆ ಹಣದ ಯೋಚನೆ. ನೂರು ಜನ ನೂರು ಮಾತನಾಡಿದ್ದರು. ಹೀಗೆ ಯೋಚಿಸುತ್ತಾ ಮಲಗಿದ ರಾಣಿ, ಯಾವಾಗ ನಿದ್ರೆ ಬಂತೋ ಗೊತ್ತಾಗಲಿಲ್ಲ. ಅಮ್ಮ ದೇವಕಿ ಬಂದು ಎಬ್ಬಿಸಿದಾಗ ಎಚ್ಚರವಾದಳು. ಬೇಗನೆ ಬ್ರಶ್ ಮಾಡಿ ಸ್ನಾನ ಮುಗಿಸಿ ತಯಾರಾದಳು. ಅಪ್ಪ ಶಿವಪ್ಪ  ಆಗಲೇ ಬೈಯಲಾರಂಭಿಸಿದರು ಹೀಗೆ ನಿದ್ದೆ ಮಾಡಿದರೆ  ಸೈನ್ಸ್ ಓದುವುದು ಸುಲಭವಲ್ಲ" ಎಂದು ಹೇಳಿದರು. ಹೊಸ ಕಾಲೇಜಿಗೆ ಸೇರಿದ ಕಾರಣ, ಅಪ್ಪ ಹಾಸ್ಟೆಲ್‌ಗೆ ಸೇರಿಸಲು ಜೊತೆಗೆ ಬಂದರು. ಅಮ್ಮನ ಮುಖದಲ್ಲಿ ಖುಷಿ ಮತ್ತು ಒಂದು ಕಡೆ ಭಯ ಕಂಡುಬಂದಿತ್ತು. ತಂಗಿ ರಾಮ್ಯಾಗೆ ಬೈ ಹೇಳಿ ಹೊರಟೆವು. ಮುಂದುವರೆಯುವುದು.....

ಕಠಿಣತೆ ಮತ್ತು ಪ್ರೀತಿಯ ಸಮನ್ವಯ

 ನನ್ನ ಬಾಲ್ಯದಲ್ಲಿ ನನ್ನ ತಂದೆ ಎತ್ತಿ ಆಡಿಸಿದ ನೆನಪು ನನ್ನಾಗಿಲ್ಲ.ಅವರು ಎಂದೂ ನನ್ನನ್ನು ಶಾಲೆಗೆ, ಅಂಗಡಿಗೆ ಕರೆದೊಯ್ಯಲಿಲ್ಲ. ನಾನು ಕೆಲಸ ಮಾಡದೇ ಇದ್ದರೆ, ಅವರು ನನ್ನನ್ನು ಗದರಿಸುತ್ತಿದ್ದರು.  ಆದರೆ ಈಗ ಎಲ್ಲವೂ ಬದಲಾಗಿದೆ.ಅಂದಿನ ಕಠಿಣ ತಂದೆ, ಇಂದಿನ ಮೃದುವಾದ ಅಜ್ಜ. ಅವರು ನನ್ನ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಾರೆ, ಅವರೊಂದಿಗೆ ಆಡುತ್ತಾರೆ, ಮತ್ತು ಮಗುವಿನಂತೆಯೇ ಹೆಬ್ಬಾಗಿಲುಗಳಲ್ಲಿ ನಕ್ಕು ನಲಿಯುತ್ತಾರೆ. ಆದರೆ ಈ ಸಮಯದಲ್ಲಿ ನನಗೆ ಅರ್ಥವಾಗದಿದ್ದುದೇನಂದರೆ, ಅವರ ಕಠಿಣ ಮಾತುಗಳ ಹಿಂದೆ ಅಡಗಿರುವ ಅವರ ಪ್ರೀತಿ ಮತ್ತು ಸಂಕಲ್ಪ. ಅವರು ನನ್ನನ್ನು ಸ್ವಾವಲಂಬನೆ, ಶ್ರದ್ಧೆ, ಶ್ರಮಪರವಾಗಿರಲು ಕಲಿಸುತ್ತಿದ್ದರು. ಆದರೆ, ಈ ಕಥೆಯ ಹಿಂದೆ ಇದ್ದಂತೆಯೇ ಇದೆ – ತಂದೆಮಕ್ಕಳ ಮೇಲಿನ ಪ್ರೀತಿ ದಪ್ಪ ನೋಟು ಅಥವಾ ತಿರಸ್ಕಾರವಲ್ಲ, ಅದು ಅವರನ್ನು ಅವರ ಕಾಲಿನ ಮೇಲೆ ನಿಲ್ಲಿಸಲು ಮತ್ತು ಜವಾಬ್ದಾರಿಯುತವಾಗಿ ಬದುಕು ಕಟ್ಟಿಕೊಡಲು ಪ್ರಯತ್ನಿಸುವ ಹೃದಯದ ಮಾತು. ಅವರ ಹಿಟ್ಲರ್ ಹೋಲಿಕೆಯ ಕಠಿಣ ಕಣ್ಣಲ್ಲಿ, ನಾನಿಂದು ನನ್ನ ಸ್ವಾವಲಂಬನೆಯ ಬದುಕು.  My Favorite Reading Resources As an avid reader, I love exploring different genres and discovering new books. One of my favorite places to find book recommendations and discussions is [this Tumblr page on books and reading](...

ಮುಗ್ಧತೆ ಮತ್ತು ಬದುಕಿನ ಪಾಠ

 ಸರಳಾ, ಮುಗ್ಧ ಸ್ವಭಾವದ ಅಂತರ್ಮುಖಿ ಹುಡುಗಿ. ಶಾಲೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದ ಬುದ್ಧಿವಂತಿಕೆಯೊಂದಿಗೆ, ಮನೆಯಲ್ಲಿದ್ದಾಗಲೆಲ್ಲಾ ಅವಳು ಪುಸ್ತಕಗಳ ಜಗತ್ತಿನಲ್ಲಿ ಮುಳುಗಿ ಹೋಗುತ್ತಿದ್ದಳು. ಅವಳಿಗೆ ಬೇಸರವೂ ಇಲ್ಲ, ಕಷ್ಟವೂ ಇಲ್ಲ – ಹೀಗೆ ತನ್ನ ಶಾಂತ ಜೀವನದಲ್ಲಿಯೇ ತೃಪ್ತಿಯಿದ್ದಳು. ಅವಳಿಗೆ ಯಾವ ಸಹಾಯ ಬೇಕಾದರೂ, ಸ್ವತಃ ಅದನ್ನು ಪಡೆದುಕೊಂಡುಬಿಡುತ್ತಿದ್ದಳು; ಓದು ಅಥವಾ ಬೇರೆ ಯಾವುದೇ ಅಗತ್ಯಗಳಾದರೂ. ಆದರೆ, ಇತರರಿಗೆ ಸಹಾಯ ಮಾಡಬೇಕೆಂದರೆ, ಸರಳಾ ಯಾವಾಗಲೂ ಸಿದ್ದವಾಗಿದ್ದಳು. ಜನರು ಅವಳ  ಮುಗ್ಧತೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದರು. ಅವಳ ತಾಳ್ಮೆ ಮತ್ತು ನಿಷ್ಕಪಟತೆಯ ಲಾಭ ಪಡೆಯುತ್ತಾ, ಜನರು ಅವಳನ್ನು ಬಳಸಿಕೊಳ್ಳುತ್ತಿರುವುದನ್ನು ಸರಳಾ ನಿಧಾನವಾಗಿ ಅರಿತುಕೊಳ್ಳುತ್ತಿದಂತೆ, ಅವಳ ಮನಸ್ಸಿನಲ್ಲಿ ಚೂರು ನೋವು ಉಂಟಾಯಿತು. "ನಾನು ಎಲ್ಲರಿಗೂ ಸಹಾಯ ಮಾಡುತ್ತಿದ್ದೇನೆ,ಆದರೆ ನನಗೆ ಅಗತ್ಯವಿದ್ದಾಗ ಯಾರೂ ಸಹಾಯ ಮಾಡುತ್ತಿಲ್ಲ.ಈ ವಿಚಾರವು ಅವಳ ಮನಸ್ಸಿನಲ್ಲಿ ಆಳವಾಗಿ ನಾಟಿಕೊಂಡಿತು. ಅಂತಿಮವಾಗಿ, ಸರಳಾ ತನ್ನ ಸುತ್ತಲಿನ ಪ್ರಪಂಚದ ವಾಸ್ತವವನ್ನು ಅರ್ಥಮಾಡಿಕೊಂಡಳು. ಯಾವುದೇ ಪರಿಗಣನೆಯಿಲ್ಲದೆ ಜನರು ತಮ್ಮ ಲಾಭಕ್ಕಾಗಿ ಇತರರನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಅವಳು ಅರಿತುಕೊಂಡಳು. ಇನ್ಮುಂದೆ, ಅವಳು ಸಹಾಯ ಮಾಡುವಾಗ ಮಿತಿಯ ಅರ್ಥವನ್ನು ತಿಳಿಯುತ್ತಿದ್ದಳು. ಅವಳು ಅಂತರ್ಮುಖಿಯಾಗಿದ್ದರೂ, ಅವಳೊಳಗಿನ ಬಲವು ಈಗ ಸ್ಪ...

ಒಂದು ಗುರಿ ಕನಸಿನ ಯಶಸ್ಸು

 ರಾಜಶೇಖರ್ ಅವರ ಜೀವನ ಅನುಭವ  ಅತ್ಯಂತ ವೈವಿಧ್ಯದಿಂದ  ಕೂಡಿತ್ತು. ಪ್ರತಿ ಬಾರಿಗೆ ಹೊಸತನದ ಹುಡುಕಾಟದಲ್ಲಿ, ನೂರು ಕೆಲಸ ಮಾಡಿದ್ದರು.22ನೇ ವಯಸ್ಸಿನಲ್ಲಿ ಅವರು ಕಾರ್ಯನಿರ್ವಾಹಕರಾಗಿ ವೃತ್ತಿ ಆರಂಭಿಸಿದರು. ಎಲ್ಲವೂ ಚೆನ್ನಾಗಿಯೇ ಹೋಗುತ್ತಿದೆ ಎಂದು ಭಾವಿಸುತ್ತಿರುವಾಗ, ಅಲ್ಪಕಾಲದಲ್ಲೇ ಅವರು ಆ ಕೆಲಸಕ್ಕೆ ರಾಜೀನಾಮೆ ಕೊಟ್ಟರು. ತಕ್ಷಣವೇ, 23ನೇ ವಯಸ್ಸಿನಲ್ಲಿ ಕಚೇರಿ ಸಹಾಯಕನಾಗಿ ಕೆಲಸಕ್ಕೆ ಸೇರಿದರು, ಆದರೆ ಅಷ್ಟರಲ್ಲಿ ಮನಸ್ಸು ಮತ್ತೊಮ್ಮೆ ಮತ್ತೊಂದು ಕೆಲಸಕ್ಕೆ ಆಸಕ್ತಿ ತೋರಿಸಿತು.24ನೇ ವಯಸ್ಸಿನಲ್ಲಿ ರಾಜಶೇಖರ್ ಮನೆ ಪೇಂಟಿಂಗ್ ಉದ್ಯಮ ಪ್ರಾರಂಭಿಸಿದರು. ಅವರು ಅವರ ಕೈಯಲ್ಲಿ ಬ್ರಷ್ ಹಿಡಿದು ಆಕರ್ಷಕ ಬಣ್ಣಗಳಿಂದ ಮನೆಗಳನ್ನು ಸುಂದರಗೊಳಿಸುತ್ತಿದ್ದರು. ಆದರೂ, ಕೆಲವೇ ತಿಂಗಳಲ್ಲಿ ಪೇಂಟಿಂಗ್ ಕೆಲಸವು ರಾಜಶೇಖರ್‌ಗಾಗಿ ಸ್ವಲ್ಪ  ಬೇಸರವಾಗಲು , ಮತ್ತೆ ಹೊಸತನದ ಹುಡುಕಾಟ ಆರಂಭವಾಯಿತು.25ನೇ ವಯಸ್ಸಿನಲ್ಲಿ ಮುಂಬೈಗೆ ತೆರಳಿ, ತಮ್ಮಮಾವನ ಹೋಟೆಲಿನಲ್ಲಿ ಕೆಲಸಕ್ಕೆ ಸೇರಿದರು. ಈ ಬಾರಿ ರಾಜಶೇಖರ್ ಅವರಿಗೆ ಭಿನ್ನವಾದ ಜೀವನ ಶೈಲಿಯನ್ನು ಅನುಭವಿಸಿದರು. ಆದರೆ ಅದು ಕೂಡ ಹೆಚ್ಚು ಸಮಯ ನಿಲ್ಲಲಿಲ್ಲ. ದಿನಸಿ ಅಂಗಡಿಯನ್ನು ಪ್ರಾರಂಭಿಸಲು ಅವರು ತಮ್ಮ ನಗರಕ್ಕೆ ಮರಳಿ, 26ನೇ ವಯಸ್ಸಿನಲ್ಲಿ ಒಂದು ವರ್ಷ ತೀವ್ರ ಪರಿಶ್ರಮದಿಂದ ಕೆಲಸ ಮಾಡಿದರು. ಆದರೂ, ವ್ಯಾಪಾರದಲ್ಲೂ ಆನಂದವಿಲ್ಲದಿದ್ದಾಗ, ಅವರು ಅದನ್ನೂ ಮುಚ್ಚಬೇಕಾಯಿತ...

ಅಸೂಯೆಯ ಪ್ರೇಮಯಾನ

ಸಮಯದಲ್ಲಿ ನಾವು ಹೈಸ್ಕೂಲ್ ಸೇರಿದ್ದೆವು. ಎಲ್ಲಾ ಹಿರಿಯರು ನಮಗೆ ಕ್ಲಾಸಿಗೆ ಹೋಗಬೇಡ ಎಂದು ಹೇಳಿದ್ದು, ನಾವು ಅಚ್ಚರಿಯಿಂದ ಕಂಗಾಲಾಗಿದ್ದೆವು. ಏನಾಗಿದೆ ಎಂಬುದೇ ತಿಳಿಯದೆ ಇಲ್ಲಿ-ಅಲ್ಲಿ ಅಲೆದಾಡುತ್ತಿದ್ದೆವು. ನಿಧಾನವಾಗಿ ನಮಗೆ ಕಾರಣ ಗೊತ್ತಾಯಿತು – ಸಂಜನ ಅವರ ಪೇಪರ್‌ನ್ನು ನಮ್ಮ ಕನ್ನಡ ಸರ್ ರವಿ  ತಿದ್ದುಪಡಿ ಮಾಡುತ್ತಿರಲಿಲ್ಲ! ಇದರಿಂದ ನಾವು ಇನ್ನಷ್ಟು ಆಶ್ಚರ್ಯಗೊಂಡೆವು. ಏಕೆಂದರೆ, ನಾವು ಯೋಚಿಸಿದ್ದೇನಂದರೆ, ರವಿ ಸರ್ ಮತ್ತು ಸಂಜನಾ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ, ಏಕೆಂದರೆ ಅವರು ಪ್ರತಿದಿನ ಊಟದ ಸಮಯದಲ್ಲಿ ಮಾತನಾಡುತ್ತಿದ್ದರು. ಆದರೆ ವಾಸ್ತವದಲ್ಲಿ, ರವಿ ಸರ್ ನಮ್ಮ ಹಿರಿಯ ಶ್ರುತಿಯನ್ನು ಪ್ರೀತಿಸುತ್ತಿದ್ದರು. ಸಂಜನಾ, ಶ್ರುತಿ ಅವರ ಸಂಬಂಧಿ ಮತ್ತು ನೆರೆಮನೆಯವಳಾಗಿದ್ದರಿಂದ, ಶ್ರುತಿ ನೀಡಿದ ಪ್ರೀತಿಪತ್ರವನ್ನು ರವಿ ಸರ್‌ ಅವರಿಗೆ ಕೊಡುವುದಕ್ಕೆ ಸಂಜನಾ ಒಪ್ಪಿರಲಿಲ್ಲ. ಇದರಿಂದ ಶಾಲೆಯಲ್ಲಿ ದೊಡ್ಡ ಪ್ರತಿಭಟನೆ ನಡೆಯಿತು. ಇಡೀ ಹೈಸ್ಕೂಲ್ ಒಂದೇ ರಹಸ್ಯದಲ್ಲಿ ಮುಳುಗಿತ್ತು.ಆದರೆ ಯಾರೂ ಬಯಸದ ಸತ್ಯವೊಂದು ಎಲ್ಲರ ಕಣ್ಣಿಗೆ ಬಿದ್ದಿತ್ತು.

ಮರದಲ್ಲಿ ಶವ ನೇತಾಡುತ್ತಿದೆ

 ಹತ್ತು ವರ್ಷಗಳ ಹಿಂದೆ, ನಮ್ಮ ಎಲ್ಲಾ ಮಕ್ಕಳು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಹೋಗುತ್ತಿದ್ದರು. ಹೊಡೆಯುವುದು, ಓಡುವುದು, ಬಿದ್ದು ನಗುವುದು—ಹೀಗೆಯೇ ದಿನವಿಡೀ ಕಾಲ ಕಳೆಯುತ್ತಿದ್ದರು. ನಂತರ, ಕಾಲ ಬದಲಾಗಿತು! ಎಲ್ಲರೂ ಖಾಸಗಿ ಅಥವಾ ಇಂಗ್ಲಿಷ್ ಮಾಧ್ಯಮದ ಕಡೆಗೆ ಓಡಲಾರಂಭಿಸಿದರು. ಹಳೆಯ ಶಾಲೆಯಲ್ಲಿ 400-600 ಮಕ್ಕಳು ಇದ್ದರೂ, ಶೌಚಾಲಯ ಮಾತ್ರ ಒಂದೇ ಇದ್ದಿತು.ಆಗ, ಎಲ್ಲಾ ಮಕ್ಕಳು ಹತ್ತಿರದ ಮೈದಾನಕ್ಕೆ, ಅಂದರೆ ಕಾಡಿನೊಳಗೆ, ಶೌಚಕ್ಕೆ ಹೋಗುತ್ತಿದ್ದರು. ಒಂದು ದಿನ, ಯಾರೋ ಮರದಲ್ಲಿ ತೂಗುತ್ತಿರುವ ಶವವನ್ನು ನೋಡಿದರು. ಮಕ್ಕಳು "ಅಯ್ಯೋ ದೇವರೇ! ಏನಿದು?" ಎಂದು ಭಯದಿಂದ ಬೆಚ್ಚಿಬಿದ್ದರು. ಯಾರೂ ಹೊರಗೆ ಹೋಗಲು ತಯಾರಿರಲಿಲ್ಲ. ಎರಡು ದಿನಗಳ ನಂತರ, ಈ ಸುದ್ದಿ ಶಿಕ್ಷಕರಿಗೆ ತಲುಪಿತು. "ಮರದಲ್ಲಿ ಶವ ನೇತಾಡುತ್ತಿದೆ" ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು.ಆದರೆ ನಮ್ಮ ಶಾಲಾ ಶಿಕ್ಷಕರು ಬುದ್ಧಿವಂತರು! ಪಂಚಾಯತ್ ಸದಸ್ಯರನ್ನು ಕರೆದು "ನೋಡ್ರಪ್ಪ, ಏನದು?" ಎಂದು ವಿಚಾರಿಸಿದರು. ಪಂಚಾಯಿತಿ ಸದಸ್ಯರು ಬಂದು ಪರಿಶೀಲನೆ ಮಾಡಿದಾಗ, ಮಸ್ತು ಗಲಾಟೆ. "ಇದು ಶವವಲ್ಲಪ್ಪಾ, ಈ ತಾಳೆ ಎಲೆಗಳೋ ತೂಗುತ್ತಿದೆ!" ಎಂದರು. ಎಲ್ಲ ಮಕ್ಕಳು, "ಏನಪ್ಪಾ, ತಾಳೆ ಎಲೆಗಳನ್ನೇ ನೋಡಿ ಬೆಚ್ಚಿಬಿದ್ದಿದ್ದೆವು!" ಎಂದು ನಕ್ಕಾಡಿದರು.

ಅವರ ಅವರ ದೃಷ್ಟಿಕೋನ

 ಕೃಷ್ಣ ಶಾರದಾವನ್ನು ಮದುವೆಯಾಗಿದ್ದಾನೆ. ಅವನಿಗೆ ಅಣ್ಣ ಕುಮಾರ್, ಅತ್ತಿಗೆ ಕಲ್ಯಾಣಿ, ಅವರ ಮಕ್ಕಳು ಕಾವ್ಯ ಮತ್ತು ಕಿರಣ್. ಕೃಷ್ಣ ಪ್ರತಿದಿನ ಹಸುವುಗಳಿಗೆ ಮೇವು ಕೊಡುವುದು, ಹೊಲದ ಕೆಲಸ, ಅಡಿಕೆ ಹೆಕ್ಕುವುದು, ಕಳೆ ಕೀಳುವುದು, ಹಾಗೆ ಪ್ರತಿ ದಿನ ಹಾಲನ್ನು ಡೇರಿಗೆ ತೆಗೆದುಕೊಂಡು ಹೋಗುತ್ತಾನೆ. ಸಂಜೆ ಅಂಗಡಿಯ ಬಳಿ ಹೋಗುವುದು ಅವನ ನಿತ್ಯದ ಚಟುವಟಿಕೆ. ಕೆಲವೊಮ್ಮೆ ಆತ ಸ್ನೇಹಿತರ ಮನೆಗಳಲ್ಲಿ ನಡೆಯುವ ಹಬ್ಬ-ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾನೆ. ಮದುವೆಯಾದ ಒಂದು ವರ್ಷದಲ್ಲಿ ಶಾರದ ತನ್ನ ಮನೆಯಲ್ಲಿ ವಾಸಿಸುತ್ತಿದ್ದಾಳೆ. "ನಾನು ನಿಮ್ಮ ಅಣ್ಣನ ಕುಟುಂಬದ ಜೊತೆಗೆ ವಾಸಿಸಲು ಇಚ್ಛಿಸುವುದಿಲ್ಲ, ನನ್ನಿಗೆ ಪ್ರತ್ಯೇಕ ಮನೆ ಬೇಕು" ಎಂದು ಅವಳು ಕೃಷ್ಣನಿಗೆ ಹೇಳಿದ್ದಾಳೆ. "ನಾನು ಮಾತ್ರ ಮನೆ ಕೆಲಸ ಮತ್ತು ಹೊಲದ ಕೆಲಸಗಳನ್ನು ಮಾಡುತ್ತೇನೆ, ಇವರು ಎಲ್ಲಾ ಹೊರಗೆ ಹೋಗುತ್ತಾರೆ" ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾಳೆ. ಇದಕ್ಕೆ ಕೃಷ್ಣ, "ನಾನು ನನ್ನ ಅಣ್ಣನ ಕುಟುಂಬದ ಜೊತೆ ಇದ್ದೇ ಇರುತ್ತೇನೆ" ಎಂದು ಹೇಳಿದ. ಕಲ್ಯಾಣಿ ಹೇಳಿದಳು, ಶಾರದಾ ಕೆಲಸ ಮಾಡಬೇಕು,ಅವಳು ಶೋಕೇಸ್ ಪೀಸ್‌ ಎಂದು ಅತ್ತಿಗೆ ಕಲ್ಯಾಣಿ ಟೀಕಿಸಿದರು. ಕೃಷ್ಣನ ಸಹೋದರ ಕುಮಾರ್, ಅವರು ಈಗಾಗಲೇ ಶಾರದ ಆಭರಣದಿಂದ ಹಣವನ್ನು ಖರ್ಚು ಆಗಿದೆ.ಮದುವೆ ಖರ್ಚು ಶಾರದಾ ಮನೆಯವರು ಮಾಡಿದ್ದರಿಂದ ಪರಿಹಾರ ಕೇಳಬಹುದು ಎಂದು ಹೇಳಿದ್ದರು.

ಧೈರ್ಯವೇ ನನ್ನ ಗೆಲುವು

 ಕಿರಣ್ ಸಂತೋಷ್, ಸರೋಜಾ ಮತ್ತು ಸಂತೋಷ್ ಅವರ ಏಕೈಕ ಮಗ. ಮಧ್ಯಮ ವರ್ಗದ ಕುಟುಂಬ, ತಾವು ಪಡೆದದ್ದನ್ನು ಆನಂದಿಸುತ್ತಾ ಬದುಕು ನಡೆಸುವಂತಹವರು. ಕಿರಣ್ ಒಂದು ಉತ್ತಮ ವ್ಯಕ್ತಿತ್ವದವನಾಗಿದ್ದು, ಯಾರನ್ನೂ ನೋಯಿಸದ, ಹಿರಿಯರು, ಮಹಿಳೆಯರು, ಮಕ್ಕಳಿಗೆ ಗೌರವ ತೋರಿಸುತ್ತಾ ಎಲ್ಲರಿಗೂ ಕಾಳಜಿ ವಹಿಸುತ್ತಿದ್ದ. ಕಾಲೇಜು ಸೇರಿದ್ದ ನಂತರ, ಅವನು ತನ್ನ ತಾಯ್ತಂದೆಯಿಂದ  ಬೈಕ್  ಕೊಂಡುಕೊಳ್ಳುವಂತೆ ಒತ್ತಾಯ ಮಾಡುತ್ತಾನೆ, ಆದರೆ ಅವರು  ಬೈಕ್  ಕೊಂಡುಕೊಳ್ಳಲು ಸಿದ್ಧರಾಗಿರಲಿಲ್ಲ. ಕಿರಣ್ ಉಪವಾಸವಿರುತ್ತಾನೆ, ಮತ್ತು ಕೊನೆಗೆ, ಅವರು ತಮ್ಮಲ್ಲಿದ್ದ ಎಲ್ಲಾ ಸಂಪತ್ತು ಕಿರಣ್‌ಗಾಗಿ  ಬೈಕ್  ಖರೀದಿಸುತ್ತಾರೆ.  ಪ್ರತಿದಿನವೂ ಅವನು ಬೈಕ್‌ನಲ್ಲಿ ಕಾಲೇಜಿಗೆ ಹೋಗುತ್ತಾನೆ. ಒಂದು ದಿನ, ಭಾರಿ ಮಳೆಯ ದಿನ. ಮಳೆಯ ತೀವ್ರತೆಯಿಂದ ರಸ್ತೆ ಗೋಚರಿಸುತ್ತಿರಲಿಲ್ಲ. ಕಿರಣ್ ತನ್ನ ಎಚ್ಚರಿಕೆಯಿಂದ ಬೈಕ್ ಚಲಿಸುತ್ತಿದ್ದಾಗ, ಪಕ್ಕದಿಂದ ಬಂದ ಲಾರಿ ಅವನನ್ನು ಡಿಕ್ಕಿ ಹೊಡೆದುಹೋಯಿತು. ಆ ಕ್ಷಣದಿಂದ ಕಿರಣನ ಜೀವನ ಸಂಪೂರ್ಣವಾಗಿ ಬದಲಾಗಿದೆ. ಆಸ್ಪತ್ರೆಯಲ್ಲಿ ಎರಡುವರ್ಷದ ಕಾಲ ಚಿಕಿತ್ಸೆ ಪಡೆದಿದ್ದರೂ, ಫಲಕಾರಿಯಾಗಲಿಲ್ಲ. ಕಿರಣ್ ಈಗ ಚಕ್ರವಾಹನ (wheelchair) ಕಷ್ಟದಲ್ಲಿದ್ದ.  ಕಾಲ ಕಳೆದಂತೆ, ಅವನು ತನ್ನ ಪರಿಸ್ಥಿತಿಯನ್ನು ಸ್ವೀಕರಿಸುತ್ತಾನೆ. ತಾಯಿ-ತಂದೆಯ ಆರ್ಥಿಕ ಸ್ಥಿತಿ ತೀರ ಕಷ್ಟದಲ್ಲಿತ್ತು, ತಮಗಿದ್ದ ಎಲ್ಲಾ ಸಂ...

ಕೇಶವನ ಕನಸು ಸಾಕಾರ: ಕಮಲಾಳ ಹೋರಾಟದ ಕಥೆ

ನಾನು ಕೇಶವ, ನನ್ನ ಎಸ್‌ಎಸ್‌ಎಲ್‌ಸಿ ಮುಗಿಸಿ ಮಾಲೀಕರಾದ ಶ್ಯಾಮ್‌ನ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ.   ನನ್ನ ತಂದೆ-ತಾಯಿ ಅಕ್ಕಮ್ಮ ಮತ್ತು ಕುಟ್ಟಿ ಕೂಡ ಅಲ್ಲೇ ಕೆಲಸ ಮಾಡುತ್ತಿದ್ದರು. ಮಾಲೀಕರಾದ ಶ್ಯಾಮ್ ಅವರನ್ನು ನೋಡಿದಾಗಲೆಲ್ಲಾ ನಾನು ಶ್ರೀಮಂತ ಕುಟುಂಬದ ಮಗಳನ್ನು ಮದುವೆಯಾಗಲು ಬಯಸುತ್ತಿದ್ದೆ. ಆದರೆ 'ಯಾರು ಕೊಡುತ್ತಾರೆ? ನನ್ನಂತಹ ಬಡ ಹುಡುಗನಿಗೆ, ಶಾಲೆಯನ್ನು ಮುಗಿಸದ ಕೂಲಿ ಕೆಲಸ ಮಾಡುವವನಿಗೆ?' ಎಂದು ನನಗೆ ತೋಚಿತು. ನಂತರ ನಾನು ಕಮಲಾಳನ್ನು ಮದುವೆಯಾದೆ.  ಅವಳ ತಂದೆ ತಾಯಿ ತಿಮ್ಮು ಮತ್ತು ರುಕ್ಕು ಅವರು ಸಹ ಇತರರ ಕೃಷಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಕಮಲ SSLC ಮುಗಿಸಿದ್ದಳು, ಆದರೆ ಹಣಕಾಸಿನ ಸಮಸ್ಯೆಯಿಂದ ಶಾಲೆ ಬಿಡಬೇಕಾಯಿತು. ಅವಳಿಗೆ ಇನ್ನೂ ಓದಲು ಆಸೆ ಇತ್ತು. ಮದುವೆಯಾದ ನಂತರ ಅವಳು 12ನೇ ತರಗತಿ ಪರೀಕ್ಷೆ ಬರೆಯಬೇಕೆಂದು ಹೇಳಿದಳು.   ಆದರೆ ನಾನು, 'ಅವಳು ಓದಿದರೆ ನನ್ನ ಮೌಲ್ಯ ಕಡಿಮೆಯಾಗುತ್ತದೆ' ಎಂಬ ಭಯದಿಂದ ಅವಳನ್ನು ಓದಲು ಬಿಡಲಿಲ್ಲ. ನನ್ನ ತಾಯಿ ಕೂಡ ಇದನ್ನು ಬಲವಾಗಿ ವಿರೋಧಿಸಿದರು. 'ಅವಳು ಓದಿದರೆ ಜನ ಏನು ಹೇಳ್ತಾರೆ?' ಅನ್ನುವುದು ನಮ್ಮ ಮನಸ್ಸಿನಲ್ಲಿತ್ತು. ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಎಲ್ಲರೂ ಅವಳ ವಿದ್ಯಾಭ್ಯಾಸ ಬಗ್ಗೆ ಕೇಳಿ ನಗುತ್ತಿದ್ದರು.  ನಾನು ಖಿನ್ನತೆಗೆ ಒಳಗಾಗಿದ್ದೆ ಮತ್ತು ಕುಡಿಯಲು ಪ್ರಾರಂಭಿಸಿದೆ. ಅನೇಕ ಬಾರಿ, ನಾನು ಹತಾಶೆಯ...

ನಾನು ನನ್ನಗೆ ತಕ್ಕ ಹೆಂಡತಿ

 ನನ್ನ ಹೆಂಡತಿ ಪುಷ್ಪಾ  ಪುಪ್ಪಳ ಸದಾ ಒಂದೇ ಮಾತು – ಅವರು ಎಷ್ಟು ಹೆಚ್ಚು ಸಂಪಾದಿಸುತ್ತಿದ್ದಾರೆ ಗೊತ್ತಾ?.ನಾನು ಯಾವಾಗಲೂ ನನ್ನ ಹೆತ್ತವರನ್ನು ದೂಷಿಸುತ್ತೇನೆ ಮತ್ತು  ಎಲ್ಲ ಅಣ್ಣನಿಗೆ ಕೊಟ್ಟಿದ್ದರೆಂದು ಯೋಚಿಸುತ್ತಿದ್ದೆ. ಇನ್ನು ನನ್ನ ಯೌವನದ ದಿನಗಳನ್ನು ಹಿಂತಿರುಗಿ ನೋಡಿದಾಗ,, ನನ್ನ ಮಗ ಈಗ ಏನು ಮಾಡುತ್ತಿದ್ದಾನೋ, ನಾನೂ ಅದೇ ಮಾಡುತ್ತಿದ್ದೆ – ಸ್ನೇಹಿತರ ಜೊತೆ ಪಾರ್ಟಿ, ಕ್ರಿಕೆಟ್ ಆಟವಾಡುವುದು, ಇಷ್ಟೆ ಚಿಂತೆ ಮಾಡದೇ, ಒಂದು ಕ್ಷಣಿಕ ಜೀವನ.  ನನ್ನ ಅಣ್ಣನಾದ ರಾಜು ಯಾವಾಗಲೂ ಭವಿಷ್ಯದ ಬಗ್ಗೆ ಯೋಜನೆ ಹಾಕಿಕೊಂಡಿದ್ದ. ‘ಐದು ವರ್ಷಗಳ ನಂತರ, ಹೀಗೆ ಹೀಗೆ ಮಾಡೋಣ’ ಎಂದಿದ್ದ. ನಮ್ಮ ತಂದೆಯಾದ ರಾಮಯ್ಯ ಜಮೀನು ಸಮವಾಗಿ ಹಂಚಿಕೊಂಡರು. ನಾನು ಒಂದು ಹಸು ತೆಗೆದುಕೊಂಡು ಅದರ ಹಾಲು ಮಾರುತ್ತಿದ್ದೆ, ಇಷ್ಟೆ ನನ್ನ ದಿನ ಕಳೆದಿತ್ತು. ನನ್ನ ಅಣ್ಣ ರಾಜು ಹತ್ತು ಹಸುಗಳನ್ನು ತೆಗೆದುಕೊಂಡು ಅದರ ಹಾಲು ಮಾರುತ್ತಿದ್ದ. ಅವನು ಯಾವಾಗಲೂ ದೊಡ್ಡದಾಗಿ ಯೋಚಿಸುತ್ತಿದ್ದ.ಅದಕ್ಕಾಗಿಯೇ ಕಷ್ಟಪಟ್ಟು ಕೆಲಸ ಮಾಡುತ್ತಿದ್ದ. ನನ್ನ ಅತ್ತಿಗೆ ಗೌರಿ ಅವನನ್ನು ಬೆಂಬಲಿಸಿದ್ದಳು.ಆದರೆ ನನ್ನ ಹೆಂಡತಿ ಪುಷ್ಪಾ ಕೂಡ  ನನ್ನಂತೆಯೇ . ಯಾವಾಗಲೂ ಯಾವ ದೊಡ್ಡ ನಿರ್ಣಯ ತಗೊಳ್ಳುವುದಕ್ಕೆ ಸಿದ್ಧ ಇಲ್ಲ. ‘ಅವರು ಎಷ್ಟು ಸಂಪಾದಿಸುತ್ತಿದ್ದಾರೆ’ ಎಂಬುದನ್ನು ಮಾತ್ರ ಹೇಳುತ್ತಾಳೆ. ಆದರೆ ಏಕೆ ಅವರು ಹೆಚ್ಚು ಸಂಪಾದಿಸುತ್ತಿದ್ದಾರೆ ಎಂದು ನ...