ಹೊಸ ಹಾದಿಯ ಕನಸು 6
ಇನ್ನೊಂದು ರೋಮಾಂಚಕ ಸಂಚಿಕೆಗೆ ಸ್ವಾಗತ!
ನೀವು ಹಿಂದಿನ ಸಂಚಿಕೆಯನ್ನು ತಪ್ಪಿಸಿಕೊಂಡಿದ್ದರೆ, ಹಿಂದಿನ ಸಂಚಿಕೆಗೆ ಇಲ್ಲಿ ಕ್ಲಿಕ್ ಮಾಡಿ ಮತ್ತು ಅದನ್ನು ಓದಿ.
ಮುಂದೆ ಮತ್ತಷ್ಟು ಕುತೂಹಲಕರ ಸಂಗತಿಗಳನ್ನು ನೋಡೋಣ!
ರಾಣಿ ಮತ್ತು ಅಪ್ಪ ಶಿವಪ್ಪ. ಅಲ್ಲಿ ಪಕ್ಕದಲ್ಲಿದ್ದ ಎಳ್ಳು ನೀರು ಕುಡಿದು, ಮತ್ತೆ ನಗರದಿಂದ ಕಾಲೇಜಿಗೆ ಹೋಗುವ ಬಸ್ಸಿಗೆ ಹತ್ತಿದರು. ಅಪ್ಪ ಬಸ್ ಕಂಡಕ್ಟರ್‌ನ್ನು ನೋಡಿ,"ಕಾಲೇಜ್ ಹೆಸರನ್ನ ಹೇಳಿ ಹೋಗ್ತೀರ?" ಎಂದು ಕೇಳಿದಾಗ, "ಹೌದು" ಎಂದು ಉತ್ತರಿಸಿದ.
ಕಂಡಕ್ಟರ್ ಊರ ಹೆಸರನ್ನು ಹೇಳುತ್ತಾ ಜೋರಾಗಿ ಕೂಗುತ್ತಿದ್ದ. ರಾಣಿಗೆ ಆ ಹೆಸರು ಹೊಸದಾಗಿತ್ತು. ಆ ಕ್ಷಣಕ್ಕೆ ನೆನಪಿಟ್ಟುಕೊಳ್ಳುವುದು ಕಷ್ಟವಾಗುತ್ತಿತ್ತು. ಅಪ್ಪ ಬಸ್ ನಂಬರ್‌ನ್ನು ಹೇಳಿ, "ಈ ನಂಬರ್‌ನ್ನು ನೆನಪಿಟ್ಟುಕೋ" ಎಂದರು.
ಜನರು ಒಬ್ಬರ ಮೇಲೆ ಒಬ್ಬರು ಬಸ್ಸಿಗೆ ಹತ್ತಲು ಪ್ರಾರಂಭಿಸಿದರು. ಬಸ್ ಕಾಲೇಜಿನ ಕಡೆ ಹೊರಟಿತು. ಕಿಟಕಿಗಳಿಲ್ಲದ ಬಸ್‌ನೊಳಗೆ ತಂಪಾದ ಗಾಳಿ ಬೀಸುತ್ತಿತ್ತು. ಎರಡೂ ಬಸ್ಸು ಹತ್ತಿ ಇಳಿದು ಆಯಾಸಗೊಂಡ ರಾಣಿಗೆ "ಆಹಾ!" ಅನ್ನಿಸಿತು. ಸೂರ್ಯ ನಿಧಾನವಾಗಿ ಮೇಲೇರುತ್ತಿದ್ದಂತೆ,ಪ್ರಕಾಶಮಾನವಾದ ಕಿರಣಗಳು ಮುಖಕ್ಕೆ ಬೀಳುತ್ತವೆ.
ಆಕಾಶದ ಕಡೆ ಚುಂಬಿಸುತ್ತಿದ್ದ ಆ ದೊಡ್ಡ ಕಟ್ಟಡಗಳು, ಮಕ್ಕಳ ಫ್ಯಾಷನ್‌ಬದ್ಧ ತೊಡಿಗೆ, ಸ್ಟೈಲಿಷ್ಟ್ ಇಂಗ್ಲಿಷ್ ಮಾತು—all seemed like calling her to a new world.
ಬಸ್‌ನಲ್ಲಿ ಕಾಲು ಇಡುವ ಜಾಗವಿಲ್ಲದಷ್ಟು ಜನರು ತುಂಬಿದ್ದರು. ಬಸ್ ಕಂಡಕ್ಟರ್ ಸ್ಟಾಪ್ ಹೆಸರನ್ನು ಜೋರಾಗಿ ಕೂಗಿದ. ಬಸ್ ತುಂಬಾ ಕಾಲೇಜು ವಿದ್ಯಾರ್ಥಿಗಳಿಂದ ತುಂಬಿತ್ತು. ರಾಣಿ ತನ್ನ ಬ್ಯಾಗ್ ಹಿಡಿದು ನಿಧಾನವಾಗಿ ಕೆಳಗಿಳಿದಳು. ಕಾಲೇಜಿಗೆ ಹೋಗಲು ಇನ್ನೂ 1 ಕಿಮೀ ನಡೆಯಬೇಕಿತ್ತು. ಕಾಲೇಜಿನಿಂದ ಹಾಸ್ಟೆಲ್ ಕೂಡ 1 ಕಿಮೀ ದೂರದಲ್ಲಿತ್ತು.
ಮೊದಲಿಗೆ ಹಾಸ್ಟೆಲ್‌ಗೇ ಹೋಗಿ ಬ್ಯಾಗ್ ಇಟ್ಟು , ನಂತರ ಕಾಲೇಜಿಗೆ ಹೋಗಬಹುದು" ಎಂದುಕೊಂಡಳು. ಇಬ್ಬರು ಹಾಸ್ಟೆಲ್ ಕಡೆ ನಡೆಯಲು ಪ್ರಾರಂಭಿಸಿದರು.
ಮುಂದುವರಿಯುವುದು...
Comments