Posts

ಹೊಸ ಹಾದಿಯ ಕನಸು 6

 ಇನ್ನೊಂದು ರೋಮಾಂಚಕ ಸಂಚಿಕೆಗೆ ಸ್ವಾಗತ! ನೀವು ಹಿಂದಿನ ಸಂಚಿಕೆಯನ್ನು ತಪ್ಪಿಸಿಕೊಂಡಿದ್ದರೆ, ಹಿಂದಿನ ಸಂಚಿಕೆಗೆ ಇಲ್ಲಿ ಕ್ಲಿಕ್ ಮಾಡಿ ಮತ್ತು ಅದನ್ನು ಓದಿ. ಮುಂದೆ  ಮತ್ತಷ್ಟು ಕುತೂಹಲಕರ ಸಂಗತಿಗಳನ್ನು ನೋಡೋಣ! ರಾಣಿ ಮತ್ತು ಅಪ್ಪ ಶಿವಪ್ಪ. ಅಲ್ಲಿ ಪಕ್ಕದಲ್ಲಿದ್ದ ಎಳ್ಳು ನೀರು ಕುಡಿದು, ಮತ್ತೆ ನಗರದಿಂದ ಕಾಲೇಜಿಗೆ ಹೋಗುವ ಬಸ್ಸಿಗೆ ಹತ್ತಿದರು. ಅಪ್ಪ ಬಸ್ ಕಂಡಕ್ಟರ್‌ನ್ನು ನೋಡಿ,"ಕಾಲೇಜ್ ಹೆಸರನ್ನ ಹೇಳಿ ಹೋಗ್ತೀರ?" ಎಂದು ಕೇಳಿದಾಗ, "ಹೌದು" ಎಂದು ಉತ್ತರಿಸಿದ. ಕಂಡಕ್ಟರ್ ಊರ ಹೆಸರನ್ನು ಹೇಳುತ್ತಾ ಜೋರಾಗಿ ಕೂಗುತ್ತಿದ್ದ. ರಾಣಿಗೆ ಆ ಹೆಸರು ಹೊಸದಾಗಿತ್ತು. ಆ ಕ್ಷಣಕ್ಕೆ ನೆನಪಿಟ್ಟುಕೊಳ್ಳುವುದು ಕಷ್ಟವಾಗುತ್ತಿತ್ತು. ಅಪ್ಪ ಬಸ್ ನಂಬರ್‌ನ್ನು ಹೇಳಿ, "ಈ ನಂಬರ್‌ನ್ನು ನೆನಪಿಟ್ಟುಕೋ" ಎಂದರು. ಜನರು ಒಬ್ಬರ ಮೇಲೆ ಒಬ್ಬರು ಬಸ್ಸಿಗೆ ಹತ್ತಲು ಪ್ರಾರಂಭಿಸಿದರು. ಬಸ್ ಕಾಲೇಜಿನ ಕಡೆ ಹೊರಟಿತು. ಕಿಟಕಿಗಳಿಲ್ಲದ ಬಸ್‌ನೊಳಗೆ ತಂಪಾದ ಗಾಳಿ ಬೀಸುತ್ತಿತ್ತು. ಎರಡೂ ಬಸ್ಸು ಹತ್ತಿ ಇಳಿದು ಆಯಾಸಗೊಂಡ ರಾಣಿಗೆ "ಆಹಾ!" ಅನ್ನಿಸಿತು. ಸೂರ್ಯ ನಿಧಾನವಾಗಿ ಮೇಲೇರುತ್ತಿದ್ದಂತೆ,ಪ್ರಕಾಶಮಾನವಾದ ಕಿರಣಗಳು ಮುಖಕ್ಕೆ ಬೀಳುತ್ತವೆ. ಆಕಾಶದ ಕಡೆ ಚುಂಬಿಸುತ್ತಿದ್ದ ಆ ದೊಡ್ಡ ಕಟ್ಟಡಗಳು, ಮಕ್ಕಳ ಫ್ಯಾಷನ್‌ಬದ್ಧ ತೊಡಿಗೆ, ಸ್ಟೈಲಿಷ್ಟ್ ಇಂಗ್ಲಿಷ್ ಮಾತು—all seemed like calling her to a new world...

ಹೊಸ ಹಾದಿಯ ಕನಸು 5

 ರಾಣಿಯ ಕನಸುಗಳು, ಆಕೆಯ ಹೊಸ ಹಾದಿಗೆ ಒಂದು ಹೊಸ ದಾರಿ ತೋರಿಸುತ್ತಿದ್ದವು. ಬಸ್‌ ಸಾಗುತ್ತಿದ್ದಂತೆ, ಅವಳ ಯೋಚನೆಗಳು ಇನ್ನಷ್ಟು ಗಾಢವಾಗುತ್ತಿದ್ದವು. ಹೊಸ ಪರಿಸರ, ಹೊಸ ಜೀವನ, ಹೊಸ ಗುರಿಗಳು—ಎಲ್ಲವನ್ನೂ ತಲುಪುವ ಹಂಬಲದಲ್ಲಿ, ರಾಣಿ ತನ್ನ ಎದೆಗೆ ಧೈರ್ಯ ತುಂಬಿಕೊಳ್ಳುತ್ತಾಳೆ. 'ನಾವು ಇಲ್ಲಿ ಬಂದಿರುವುದು ಒಂದು ಹೊಸ ಆರಂಭದ ಗುರುತು' ಎಂದುಕೊಂಡಳು. ಹಠಾತ್ ರಾಣಿಗೆ ಹೊಟ್ಟೆ ತೊಳಲಾಯಿತು, ಒವ್ವೇಲೆ ವಾಂತಿ ಬರುವಂತಾಯಿತು.ಆಗ ಬಸ್ ನಿಧಾನವಾಗಿ ಬ್ರೇಕ್ ಹಾಕಿ, ಕೊನೆಯ ಬಸ್ ಸ್ಟಾಪ್‌ನಲ್ಲಿ ನಿಂತಿತು. ಅಪ್ಪ ಶಿವಪ್ಪ, 'ಏನಾಯ್ತು?' ಎಂದು ಕೇಳಿದಾಗ, ರಾಣಿ ಸ್ವಲ್ಪ ಹೊತ್ತು ಹಾಗೆ ಕುಳಿತುಕೊಂಡು ಸಹಿಸಿಕೊಳ್ಳುತ್ತಾಳೆ. ಎಲ್ಲರೂ ಬಸ್ಸಿನಿಂದ ಇಳಿದ ನಂತರ, ನಿಧಾನವಾಗಿ ಇಳಿದು, ಅಪ್ಪನ ಹಿಂದೆ ನಡೆಯತೊಡಗಿದಳು.ಅವರು ಮೀನು ಮಾರುಕಟ್ಟೆಯ ಮಧ್ಯೆ ಸಣ್ಣ ಹಾದಿಯಲ್ಲಿ ಹೋಗುತ್ತಿರುವಾಗ, ಅಲ್ಲಿನ ವಾಸನೆಗೆ ರಾಣಿಗೆ ಮತ್ತೊಮ್ಮೆ ಹೊಟ್ಟೆ ತೊಳಲಾಯಿತು. ಅದಕ್ಕಾಗಿ ಟವೆಲ್ ಮೂಗು ಬಾಯಿಗೆ ಭದ್ರವಾಗಿ ಮುಚ್ಚಿಕೊಂಡಳು.ಅದನ್ನು ಕಂಡು ಮೀನು ಮಾರುವ ಹೆಂಗಸೊಬ್ಬಳು ಮುಖ-ಬಾಯಿ ಮುಚ್ಚಿಕೊಂಡು ಈ ದಾರಿಯಲ್ಲಿ ಯಾಕೆ ಬರಬೇಕಾಗಿತ್ತು' ಎಂದಳು. ರಾಣಿಗೆ, 'ಅಬ್ಬಾ! ಎಷ್ಟು ದೂರ ನಡೆಯಬೇಕೆಂದು?' ಅನ್ನಿಸಿತು. ಕೊನೆಗೆ ಆ ಹಾದಿಯನ್ನು ದಾಟಿ, ಹೊರಗಿನ ರಸ್ತೆಗೆ ಬಂದು ನಿಂತರು. ರಸ್ತೆಯ ಸಂದು ದಾಟಿ, ಗಬ್ಬನೆ ಹೊಟ್ಟೆ ಹಿಡಿದು ವಾಂತಿ ಮಾಡಲಾರಂ...

ಹೊಸ ಹಾದಿಯ ಕನಸು 4

 ಬಸ್ಸು ಪಿಸುಗುಟ್ಟುತ್ತಾ ಹೆಜ್ಜೆ ಹೆಜ್ಜೆಯಾಗಿ ಸಾಗುತ್ತಿತ್ತು. ಜನಸಂದಣಿ, ಬಿಸಿನಗರದ ಗಾಳಿಯಲ್ಲಿ ರಾಣಿ ಆಲೋಚನೆಯ ಜಾಲದಲ್ಲಿ ಮುಳುಗುತ್ತಾಳೆ. "ಈ ಪ್ರಯಾಣ ಕೇವಲ ಬಸ್‌ನಲ್ಲಿಯೇ ಅಂತ್ಯಗೊಳ್ಳುವುದಿಲ್ಲ," ಅವಳ ಅಂತರಾಳದ ಆಲೋಚನೆಗಳು ಬಲಹೀನವಾಗಿದ್ದರೂ ಆಕೆಗೆ ಆಸಕ್ತಿ ಮೂಡಿಸುತ್ತವೆ. ಅಷ್ಟು ದಿನ ಹಳೆಯ ಪರಿಸರಕ್ಕೆ ಒಗ್ಗಿದ್ದ ರಾಣಿ, ಕಣ್ಣೆದುರಿನಲ್ಲಿಯೇ ಹಾದುಹೋಗುವ ದೊಡ್ಡ ದೊಡ್ಡ ಕಟ್ಟಡಗಳು, ಅಂಗಡಿಗಳು, ಬಟ್ಟೆಗಳ ಅಂಗಡಿಗಳಲ್ಲಿ ಬಣ್ಣ ಬಣ್ಣದ ಬಟ್ಟೆಗಳು, ಜನರ ವೈವಿಧ್ಯಮಯ ವೇಷಭೂಷಣಗಳನ್ನು ನೋಡಿದಾಗ ತಾನು ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುತ್ತಿದ್ದೇನೆ ಎಂದುಕೊಂಡಳು. ರಾಣಿ ತನ್ನ ವಯಸ್ಸಿಗೆ ತಕ್ಕ ನೂರು ಕನಸುಗಳನ್ನು ಹೊತ್ತಿದ್ದಳು. ತನ್ನ ಯೋಚನಾ ಜಾಲದಲ್ಲಿ ಮುಳುಗಿದ್ದ ರಾಣಿಗೆ ಹಠಾತ್, ಬಸ್ಸು ಒಂದು ದೊಡ್ಡ ಗುಂಡಿಗೆ ಬಿದ್ದಂತೆ ತಿರುಗಿ ಹೋಗಿತು. ರಾಣಿ ತನ್ನ ಬ್ಯಾಗ್ ಬಿಗಿಯಾಗಿ ಹಿಡಿದುಕೊಂಡು, ಜಾಗರೂಕರಾಗಿ ಬಸ್‌ನಲ್ಲಿ ನಿಂತಿದ್ದಳು. ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ತಾನು ಮುಂದು, ತಾನು ಮುಂದು ಎಂದು ಪೈಪೋಟಿಗೆ ನಿಂತು ಮುಂದೆ ಸಾಗುತಿದ್ದವು.2-3 ಸ್ಟಾಪ್‌ಗಳ ನಂತರ, ರಾಣಿಗೆ ಕುಳಿತುಕೊಳ್ಳಲು ಸೀಟ್ ಸಿಕ್ಕಿತು. ಅವಳ ಅಪ್ಪ ಶಿವಪ್ಪ ಹಿಂಬದಿ ಹೋಗಿ ಕುಳಿತುಕೊಂಡರು. ಬಸ್‌ ಮಾತ್ರ ಜನರನ್ನು ಹತ್ತಿಸುತ್ತಾ ಇಳಿಸುತ್ತಾ ಸಾಗುತ್ತಿತ್ತು."ಕಂಡಕ್ಟರ್, 'ಎಲ್ಲಿ ಹಿಂದಿನ ಬಸ್ ಮುಂದೆ ಹೋಗುತು' ಎಂದು ಜೋರಾಗಿ ಅವ...

ಹೊಸ ಹಾದಿಯ ಕನಸು 3

 ಬಸ್‌ನಿಂದ ಇಳಿದ ರಾಣಿ ಮತ್ತು ಅವಳ ಅಪ್ಪ ಶಿವಪ್ಪ ಇನ್ನೊಂದು ಬಸ್‌ಗಾಗಿ ಕಾಯುತ್ತಾ ನಿಂತಿದ್ದರು. ಬಸ್‌ಸ್ಟ್ಯಾಂಡ್‌ನಲ್ಲಿ ಎಲ್ಲೆಡೆ ಕಸ, ಪ್ಲಾಸ್ಟಿಕ್ ಬಾಟಲ್‌ಗಳು ಬಿದ್ದಿದ್ದವು. ಆ ಸುತ್ತಲಿನ ಅಸ್ಥಿರ ಪರಿಸರವನ್ನು ನೋಡಿ, ರಾಣಿ ಹೌಹಾರಿಸುತ್ತಿದ್ದು, "ಎಲ್ಲಿ ನಿಂತಿದ್ದೇವೆ?" ಎಂದು ತಲೆಯಲ್ಲೇ ಅಸಹ್ಯದಿಂದ ಮನದಟ್ಟು ಮಾಡಿಕೊಂಡಳು. ಸ್ವಲ್ಪ ಹೊತ್ತಿನ ನಂತರ ಬಸ್ಸೊಂದು ಜನಸಂದಣಿಯನ್ನು ಭೇದಿಸಿಕೊಂಡು   ಬಂದು ನಿಂತಿತು. ಬಸ್‌ ಜನರಿಂದ ತುಂಬಿ ತುಳುಕುತ್ತಿತ್ತು. "ಇದಕ್ಕೆಲ್ಲ ನಾವು ತಾಳುಬೇಕಾ?" ಎಂದು ರಾಣಿ ತಾನು ಮಾಡುವ ಪ್ರತಿ ಹೆಜ್ಜೆಗೂ ಸುಸ್ತಾಗಿ ಹೋಗುತ್ತಾ, ಆಕೆಯ ಕೈಯಲ್ಲಿದ್ದ ಬ್ಯಾಗನ್ನು ಬಿಗಿಯಾಗಿ ಹಿಡಿದುಕೊಂಡು, ಅಪ್ಪನ ಕೈ ಹಿಡಿದುಕೊಂಡಳು. ಹೇಗೋ ಜನರನ್ನು ಪಕ್ಕಕ್ಕೆ ತಳ್ಳಿ, ರಾಣಿ ಮತ್ತು ಶಿವಪ್ಪ ಬಸ್‌ ಒಳಗೆ ನುಸುಳಿದರು. ಆಮೇಲೆ, ರಾಣಿ ಅಪ್ಪನ ಕಡೆ ನೋಡಿದರೂ, ಅವನ ಮುಖದಲ್ಲಿ ಒಂದು ವಿಚಿತ್ರ ಶಾಂತಿ. " ಇಲ್ಲಿ ಏನಾಗುತ್ತಿದೆ ಎಂದು ಅವನಿಗೆ ಅನಿಸುವುದಿಲ್ಲವೇ?"  ಎಂದು ರಾಣಿ ಆಲೋಚಿಸುತ್ತಿರುವಷ್ಟರಲ್ಲಿ, ಬಸ್‌ನ ಒಳಗೆ ಒಂದು ಬಿಸಿನಗರದ ಝಳಕು ಎಸೆಯಿತು. ಆಕೆಗೆ ಆ ಮನೆಯಲ್ಲಿ ಇರುವಾಗಿಸಿದ ಆ ಗಾಢ ತಪಸ್ಸು ನೆನಪಾದಂತಿತ್ತು.ಅದು ಕೇವಲ ಪ್ರಯಾಣವಲ್ಲ, ಈ ಬದುಕಿನ ಒಂದು ಸಂಕೇತವಾಗಿತ್ತು. "ನನಗೆ ಮುಂದೆ ಏನೋ ದೊಡ್ಡದು ಕಾದಿರುವಂತೆ ಅನ್ನಿಸುತ್ತಿದೆ..." ಈ ಯೋಚನೆಗಳ ನಡುವೆ ಆಕೆಗ...

ಹೊಸ ಹಾದಿಯ ಕನಸು 2

 ರಾಣಿ ಮತ್ತು ಅವಳ ಅಪ್ಪ ಶಿವಪ್ಪ ಬಸ್ ಹತ್ತಿಕೊಂಡರು. ಬೆಳಗ್ಗೆ 7 ಗಂಟೆಯ ಬಸ್ ಆಗಿದ್ದರಿಂದ ಜನರು ಅಷ್ಟು ಇದ್ದಿರಲಿಲ್ಲ, ಮತ್ತು ಕಾಲೇಜು ಇನ್ನೂ ಆರಂಭವಾಗಿರಲಿಲ್ಲ. ರಾಣಿ ಖಾಲಿ ಇರುವ ಸೀಟಿನಲ್ಲಿ ಕುಳಿತಳು. ಆಕೆ ಕುಳಿತ ಸೀಟಿನಲ್ಲಿ ಯಾರು ಬರಲಿಲ್ಲವೆಂದು ತಾನು ತನ್ನ ಬ್ಯಾಗನ್ನು ಪಕ್ಕದಲ್ಲಿ ಇಟ್ಟುಕೊಂಡಳು. ಬಸ್‌ನಲ್ಲಿ "ಹರಿವಾಸನಂ" ಎಂಬ ಅಯ್ಯಪ್ಪನ ಹಾಡು ಜೋರಾಗಿ ಕೇಳಿಸುತ್ತಿತ್ತು.  ಬಸ್ ಸ್ಟ್ಯಾಂಡಿನಲ್ಲಿ ಬಸ್ ನಿಲ್ಲುತ್ತಿದ್ದಾಗ,ಬಸ್ ಮುಂದಿನ ಹಿಂದಿನ ಬಾಗಿಲಿನ ಕಡೆಗೆ ತಿರುಗಿ, ಯಾರಾದರೂ ನನ್ನ ಕಾಲೇಜಿಗೆ ಬರುವವರಿದಾರಾ ಎಂದು ನೋಡುತ್ತಿದ್ದಳು. ಆ ಹಾಡಿನ ಮಧ್ಯದಲ್ಲಿ, ಹಿಮದ ಹನಿಗಳ ನಡುವೆ ಬಸ್ ಸದ್ದು ಮಾಡುತ್ತಾ ಹೋಗುತ್ತಿತ್ತು.ಆ ನಡುವೆ ರಾಣಿ ನಿಧಾನವಾಗಿ ನಿದ್ದೆಗೆ ಜಾರಿದಳು.ಆದರೆ ಆಕೆಗೇ ಅದು ಗೊತ್ತಾಗಲಿಲ್ಲ. ಶಿವಪ್ಪ ಬಂದು ಎಬ್ಬಿಸಿದಾಗ, ರಾಣಿ ಬೆಚ್ಚಿ ಎದ್ದುಕೊಂಡಳು. ಅಷ್ಟರಲ್ಲೇ, ಬಸ್ ಆಕೆಗೆ ಇಳಿಯಬೇಕಾದ ಬಸ್ ಸ್ಟ್ಯಾಂಡಿಗೆ ಬಂದು ನಿಂತಿತ್ತು.  ಆ ಹೊತ್ತಿಗೆ ಬಸ್ ಜನರಿಂದ ತುಂಬಿತ್ತು. ಹೇಗೋ ಜನರ ನಡುವೆ ನುಸುಳಿ,ಬ್ಯಾಗ್ನ್ನು ಎಳೆದುಕೊಂಡು ರಾಣಿ ತನ್ನ ಅಪ್ಪನೊಂದಿಗೆ ಬಸ್‌ನಿಂದ ಇಳಿದಳು. ಮುಂದುವರೆಯುವುದು..... Older  https://smartstandlif.blogspot.com/2024/09/1.html

ಹೊಸ ಹಾದಿಯ ಕನಸು 1

 ಬಸ್‌ಗೆ ತಡವಾಗಿದರಿಂದ, ಅಪ್ಪ ಶಿವಪ್ಪ ಅಮ್ಮ ದೇವಕಿನ ಸೇರಿಸಿ ಬೈಯಲಾರಂಭಿಸಿದರು. ಮತ್ತೆ ಕೈ ಬೀಸಿಕೊಂಡು ಮುಂದೆ ನಡೆದರು.ರಾಣಿ ಹೆಗಲ ಮೇಲೆ ಕಾಲೇಜು ಬ್ಯಾಗ್‌ನ್ನು, ಕೈಯಲ್ಲಿ ಬಟ್ಟೆ ತುಂಬಿದ ಬ್ಯಾಗ್‌ನ್ನು ಹಿಡಿದು ಹಿಂದಿನಿಂದ ಓಡಿದಳು.ಮನೆಯಿಂದ ಬಸ್ ನಿಲ್ದಾಣಗೆ 15 ನಿಮಿಷದ ದಾರಿ. ಬಸ್ ಶ್ರೀದೇವಿ ಪಾಯಂ ಎಂದು ಸೌಂಡ್ ಮಾಡಿದ ಶಬ್ದ ಕೇಳಿಸಿತು. ಅಪ್ಪನ ಸಿಟ್ಟು ಏನೋ ಜಾಸ್ತಿಯಾಯಿತು."ಇನ್ನು ಬಸ್ ಸಿಕ್ಕಾಗನೇ"ಎಂದು ಬೈಯಲಾರಂಭಿಸಿದರು. ರಾಣಿ ಬ್ಯಾಗ್ಗಳ ಭಾರದಿಂದ ಸುಸ್ತಾಗಿ ಉಸು ಉಸು ಎಂದು ನಿಟ್ಟುಸಿರು ಬೀಡುತಿದ್ದಳು. ದಾರಿಯಲ್ಲಿ ಹಾಲು ಡೈರಿ ಹಾಕಲು ಹೋದ ರಾಮಯ್ಯ ಸಿಕ್ಕಿದರು, ಅವರು "ಬಸ್ ಇನ್ನೂ ಬಂದಿಲ್ಲ, ದೂರದಲ್ಲಿದೆ,ಬರುವಾಗಲೆ ಹಾರ್ನ್ ಹಾಕುತ್ತಾರೆ" ಎಂದು ಹೇಳಿದರು. ಶಿವಪ್ಪ ದಬ್ಬ ದಬ್ಬ ಹೆಜ್ಜೆ ಹಾಕಿ ಹೋದರು, ರಾಣಿ ಅವರ ಹಿಂದಿನಿಂದ ಓಡಿದಳು. ಅರ್ಧ ದಾರಿ ಇರುವಾಗಲೇ ಬಸ್ ಬಂದು ಬಸ್ ಸ್ಟ್ಯಾಂಡ್‌ನಲ್ಲಿ ನಿಂತಿತು.ಇನ್ನೂ ಬಸ್ ಕೈ ತಪ್ಪಿತು,ಎಂದುಕೊಂಡು ಮತ್ತೆ ಅಪ್ಪನ ಬೈಗುಳ ನೆನೆಸಿ ನಡುಗಿದಳು. ಆದರೆ ಬಸ್ ಡ್ರೈವರ್ ದೂರದಲ್ಲಿಯೇ ಆವರನ್ನ ಗಮನಿಸಿ ಸ್ವಲ್ಪ ಹೊತ್ತು ಕಾದೂ, ಹತ್ತಿಕೊಂಡರು. ಮುಂದುವರೆಯುವುದು.....

ಹೊಸ ಹಾದಿಯ ಕನಸು

ರಾಣಿ ಆಗಷ್ಟೇ 10ನೇ ತರಗತಿ ಮುಗಿಸಿ ಕಾಲೇಜಿಗೆ ಸೇರಿದು. ಕಾಲೇಜು ಮನೆಯಿಂದ ಸ್ವಲ್ಪ ದೂರವಾಗಿರುವುದರಿಂದ ಹಾಸ್ಟೆಲ್‌ನಲ್ಲಿ ಇರಬೇಕಾಯಿತು. ಸೈನ್ಸ್ ಆಯ್ಕೆ ಮಾಡಿ ಎಂಜಿನಿಯರಿಂಗ್ ಮಾಡುವ ಕನಸು. ನಾಳೆಯಿಂದ ಕಾಲೇಜು ಪ್ರಾರಂಭವಾಗುತ್ತದೆ. ಆ ರಾತ್ರಿ, ರಾಣಿಗೆ ನಿದ್ರೆ ಬರಲಿಲ್ಲ. ಹೊಸ ಕಾಲೇಜು ಹೇಗಿರುತ್ತೆ, ಸ್ನೇಹಿತರು ಹೇಗಿರುತ್ತಾರೆ? ನಾನು ಸೈನ್ಸ್ ಓದಬಹುದೇ? ಇಷ್ಟು ದಿನ ಕನ್ನಡದಲ್ಲಿ ಓದಿದ ರಾಣಿಗೆ, ಮುಂದೆ ಎಲ್ಲಾ ವಿಷಯಗಳು ಇಂಗ್ಲಿಷ್‌ನಲ್ಲಿ ಇರುವುದರಿಂದ ಅರ್ಥವಾಗುತ್ತಾ ಎಂಬ ಭಯ.   ಅಮ್ಮನಿಗೆ ಸಂಬಂಧಿಕರು - "ಅಷ್ಟು ಹೆಣ್ಣುಮಕ್ಕಳನ್ನು ಯಾಕೆ ಓದಿಸುತ್ತೀರಾ, ಗಂಡು ಸಿಗೋದು ಕಷ್ಟ," ಎಂದವರು. ಅಮ್ಮನಿಗೆ ಭಯ ಮತ್ತು ಆಶಾಭಾವನೆಗಳ ಮಿಶ್ರ ಭಾವನೆಗಳಾಗಿದ್ದವು. ಅಪ್ಪನಿಗೆ ಹಣದ ಯೋಚನೆ. ನೂರು ಜನ ನೂರು ಮಾತನಾಡಿದ್ದರು. ಹೀಗೆ ಯೋಚಿಸುತ್ತಾ ಮಲಗಿದ ರಾಣಿ, ಯಾವಾಗ ನಿದ್ರೆ ಬಂತೋ ಗೊತ್ತಾಗಲಿಲ್ಲ. ಅಮ್ಮ ದೇವಕಿ ಬಂದು ಎಬ್ಬಿಸಿದಾಗ ಎಚ್ಚರವಾದಳು. ಬೇಗನೆ ಬ್ರಶ್ ಮಾಡಿ ಸ್ನಾನ ಮುಗಿಸಿ ತಯಾರಾದಳು. ಅಪ್ಪ ಶಿವಪ್ಪ  ಆಗಲೇ ಬೈಯಲಾರಂಭಿಸಿದರು ಹೀಗೆ ನಿದ್ದೆ ಮಾಡಿದರೆ  ಸೈನ್ಸ್ ಓದುವುದು ಸುಲಭವಲ್ಲ" ಎಂದು ಹೇಳಿದರು. ಹೊಸ ಕಾಲೇಜಿಗೆ ಸೇರಿದ ಕಾರಣ, ಅಪ್ಪ ಹಾಸ್ಟೆಲ್‌ಗೆ ಸೇರಿಸಲು ಜೊತೆಗೆ ಬಂದರು. ಅಮ್ಮನ ಮುಖದಲ್ಲಿ ಖುಷಿ ಮತ್ತು ಒಂದು ಕಡೆ ಭಯ ಕಂಡುಬಂದಿತ್ತು. ತಂಗಿ ರಾಮ್ಯಾಗೆ ಬೈ ಹೇಳಿ ಹೊರಟೆವು. ಮುಂದುವರೆಯುವುದು.....